ಲೋಕಪಾಲಕರು
..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಪೂರ್ಣ ಸುಗುಣಾಂಬೋಧಿ ಅನಘ ಲಕ್ಷ್ಮೀರಮಣ
ಜ್ಞಾನಾದಿ ನಿಖಿಳ ಸೌಭಾಗ್ಯದನೆ ಸ್ವಾಮಿ
ಅನವರತ ಸರ್ವ ದಿಕ್ಪಾಲಕರೊಳಿದ್ದು ನೀ
ಎನ್ನ ರಕ್ಷಿಪ ವಿಭುವೆ ಶರಣು ಮಾಂ ಪಾಹಿ ಪ
ಇಂದ್ರಾಗ್ನಿ ಯಮ ನಿಯಯತಿ ವರುಣ ವಾಯು
ಚಂದ್ರ ನಿಧಿಪತಿ ಈಶಾನ ಫಣಿ ಬ್ರಹ್ಮ
ಇಂದಿರಾಪತಿ ಸದಾ ನಿಮ್ಮೊಳು ನಿಂತು ಆ
ನಂದ ಸರ್ವೇಷ್ಟಗಳ ಈವ ಸ್ಮರಿಪರಿಗೆ 1
ವಾಮ ಹಸ್ತದಿ ವಜ್ರಬಲ ಕರವು ಅಭಯದವು
ಹೇಮವರ್ಣನೆ ಸಹಸ್ರಾಕ್ಷ ಸುರರಾಜ
ಕಾಮಿತಾರ್ಥವನೀವೆ ಐರಾವತಾರೂಢ
ನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2
ಹೇಮ ವರ್ಣಾಂಗನೆ ಸಪ್ತಕರ ಸಪ್ತಾರ್ಚಿ
ನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆ
ಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆ
ನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ3
ಜ್ಞಾನಸುಖಮಯ ವಿಷ್ಣುಯಜ್ಞನಿಗೆ ಪ್ರಿಯತರನೆ
ಕೃಷ್ಣವರ್ಣನೆ ಲೋಕಕರ್ಮಫಲಪ್ರದನೆ
ದಂಡಧರ ಅಭಯದನೆ ಮಹಿಷವಾಹನ ಯಮನೆ
ಎನ್ನ ಮನ್ನಿಸಿ ಪೊರೆ ಇಲಾಪತಿಯೆ ಶರಣು 4
ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆ
ಅಸಿಧರನೆ ಅಭಯದನೆ ಶರಣು ಮಾಂ ಪಾಹಿ
ನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವ
ಕೇಶ ನಿಋಋತಿ ನೀಲ ನರವಾಹ ನಮಸ್ತೆ 5
ಮೀನ ವಡವ ಕಮಠ ಕ್ರೋಡನಿಗೆ ಪ್ರಿಯತರನೆ
ಸ್ವರ್ಣವರ್ಣನೆ ವರುಣ ಪದ್ಮಿನೀರಮಣ
ವನಪತಿಯೆ ಮಕರವಾಹನ ಹವಳಭೂಷಣನೆ
ನಿನಗೆ ನಮೋ ಪಾಶಧರ ಅಭಯದನೆ ಪಾಹಿ 6
ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆ
ಪ್ರಿಯತರನೆ ಹರಿಣವಾಹನ ಮೋಹಿನೀಶ
ಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆ
ಕಾಯೆನ್ನ ದಯದಿ ಗದಾಪಾಣಿ ಅಭಯದನೆ 7
ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆ
ಸೂರಿಜನ ಚಿಂತ್ಯ ನೀ ಸಿತಕಾಂತಿ ಕಾಯ
ಪೊರೆ ಎನ್ನ ಅಭಯದನೆ ರೋಹಿಣೀಪತಿ ಸೋಮ
ಪುರುಟಭೂಷಣ ಸುಖದ ಕುಮುದಸದ್ಮಸ್ಥ 8
ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆ
ವಿಪರತ್ನನಿಭ ಯಕ್ಷ ವೈಶ್ರವಣ ಪಾಹಿ
ಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊ
ಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9
ಮನುಜವಾಹ್ಯವು ವರವಿಮಾನದಿ ಕುಳಿತಿಹೆ
ಅನಲಾಕ್ಷ ಶಂಖಗದಾಧರ ನಮೋ ಕಿರೀಟಿ
ಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿ
ಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10
ನಿರ್ದೋಷ ಸುಖಮಯ ಜಯೇಶನಿಗೆ ಪ್ರಿಯತರನೆ
ನೀ ದಯದಿ ಸಲಹೆನ್ನ ಈಶಾನ ಶೂಲಿ
ಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆ
ಸದಾ ಅಭಯ ಎನಗಿತ್ತು ಪೊರೆಯೊ ಗೌರೀಶ 11
ಆನಂದರೂಪ ಸಂಕರ್ಷಣ ಅನಂತನಿಗೆ
ಅನಂತ ನೀ ಪ್ರಿಯತರನು ಶುಕ್ಲವರ್ಣ
ನಿನ್ನ ಸತಿ ವಾರುಣೀಸಮೇತ ಅಭಯದನಾಗಿ
ಎನ್ನ ಪೊರೆ ಕೃಷ್ಟಿಧರ ನಮೋ ನೀಲವಾಸ 12
ಜಗದೀಶ ಭೂರಮಣ ಕೇಶವ ಸುಪ್ರಿಯತಮನೆ
ಜಗದಾದ್ಯ ಬ್ರಹ್ಮ ಸರಸ್ವತೀಸಮೇತ
ಖಡ್ಗಧರ ಅಭಯದನೆ ನಮೋ ರಕ್ತವರ್ಣನೆ
ಮುಗಿದು ಕರ ಶರಣಾದೆ ಪೊರೆ ಪಿತಾಮಹನೆ 13
ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸ
ಪಾವಿತ್ರ್ಯ ಸುಖ ವಿತ್ತ ಜ್ಞಾನ ವಿಜ್ಞಾನ
ಈವೋರು ಇವು ಸರ್ವ ಶ್ರವಣ ಪಠಣವ ಮಾಡೆ
ವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14
ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥ
ಚಂದ್ರ ವೈಶ್ರವಣ ಈಶಾನ ಅನಂತಸ್ಥ
ಮಂದಜಾಸನಪಿತ ಪ್ರಸನ್ನ ಶ್ರೀನಿವಾಸನು
ಕುಂದದ ಸೌಭಾಗ್ಯವನು ಈವ ಕರುಣಾಳು 15
***
ಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1
ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2
ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3
ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4
ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5
ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6
ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7
ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8
ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9
ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10
ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11
ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12
ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13
ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14
ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
*******
No comments:
Post a Comment