Monday, 11 November 2019

ಕೊಡು ಸೀರಿ ಸೀರಿಹರಿ ಕೊಡು ankita pranesha vittala

by ಪ್ರಾಣೇಶದಾಸರು
ಕೊಡು ಸೀರಿ ಸೀರಿಹರಿ|ಕೊಡು ಸೀರಿ ಸೀರಿ ಹರಿ ಪ

ಮಾಧವನೀ ನಮ್ಮ |ಹಾದಿ ಹೋಗಲು ವಾರಿಗ್ಯಾದರೆ ಈಗ ಸರಿ 1

ಅಕ್ಕರವಲ್ಲಿದು ಫಕ್ಕನೆ ಕಂಡರು |ಚಿಕ್ಕವ ನೀನು ಅರಿ 2

ಬೇಡಲು ಪಾಲು ನೀಡದೆ ನಾವು |ಆಡಿದ್ದದೆಲ್ಲ ಮರಿ 3

ನಲ್ಲರು ಹುಡುಕುತ ಇಲ್ಲಿಗೆ ಬಂದರೆ |ಕೊಲ್ಲರೇ ಕಂಡ ಪರಿ 4

ಪ್ರಾಣೇಶ ವಿಠಲ ನಮ್ಮಾನವ ಕಾಯ್ವರ |ಕಾಣೆವೋ ಹತ್ತಿಗರಿ 5
*******

No comments:

Post a Comment