by ಪ್ರಾಣೇಶದಾಸರು
ಇಕ್ಕೊಳ್ಳಕ್ಕೊ ಸಿಕ್ಕ ರಂಗನೋಡು
ಈಠಕ್ಕ ಮಾಡಿಹ ಬಹು ಕೇಡು ಪ
ಪೆಟ್ಟಿಗೆಯೊಳು ದೇವರುಗಳು ಗಂಡಸ- |
ರಿಟ್ಟಿರಲವ ಅಂಜದಾಲೆ ||
ಮುಟ್ಟಿ ಮನೆಗೊಂದೊಂದೊಗೆದು ಮುರು-
ಬಟ್ಟಿ ಮಾಡಿಬಿಟ್ಟನಲ್ಲೆ 1
ತಾ ಕೆಡಿಸಿ ಒಡೆದಡಕಲಿ ಗಡಿಗೆಗಳನು |
ಆಕಳ ಒಳಘೊಗಿಸಿಹ್ಯನೂ ||
ಈ ಕರಕರೆಯರಿಯಳು ನಮ್ಮತೆಯೆಂ-
ಬಾಕೆನ್ನನು ಕೊಲ್ಲುವಳಲ್ಲೆ 2
ಅಡಕಲಿಯೊಳು ದೇವರ ತಾಳಿಯ ಸರ |
ತುಡುಗು ಮಾಡಿ ತಕ್ಕೊಂಡು ||
ಗಡಬಿಡಿ ಮಾಡೆಲ್ಲೊಗೆದನೊ ನಾ ಎ- |
ಷ್ಠುಡುಕಿದರೂ ಸಿಗವಲ್ಲೆ3
ನೆಲವಿಗೇರಿಸಿದ ಚಟ್ಟಿಗಿಗಳು ಒಂ- |
ದಳುಕದೆ ಮೊದಲಂತಿಹವೆ ||
ಇಳುಕಲು ಒಂದಕ್ಕೊಂದಕೆ ತೂತು |
ಪಾಲ್ಗಳು ಈಸನಿಲ್ಲವಲ್ಲೆ 4
ಅಡವಿಯ ದೇವರ ಹೆಸರಿಲಿ ತುಪ್ಪವ |
ಮಡಿಯ ಮಾಡಿ ತುಂಬಿರಲು ||
ಕುಡಿದು ಮುಚ್ಚಿ ಮೊದಲಪ್ಪಂದಿಟ್ಟಿಹ |
ಕೊಡದೊಳು ಬರಿ ನೀರಲ್ಲೇ 5
ಅಂಡಜವಾಹನಓಕಳಿ ಚಲ್ಲಿಹ |
ಪುಂಡತನದಿ ಮಂಚದ ಮೇಲೆ ||
ಭಂಡಿದು ಏನೆಂಧೇಳಲಿ ಮನೆಯೊಳು |
ಗಂಡನ ಸಿಟ್ಟು ನೀ ಬಲ್ಲೆಲ್ಲೆ 6
ಏನೆನರಿಯದವಳಿಗಿದು ಬಂದಿತು |
ಕ್ಷೋಣಿಯೊಳಗೆ ಒಣಹರಲೆ ||
ಮಾನನೀಯಳೆ ಈಪರಿಮಾಡಿ- |
ದನಿಕೋ ಪ್ರಾಣೇಶ ವಿಠಲನೀಗ 7
********
ಇಕ್ಕೊಳ್ಳಕ್ಕೊ ಸಿಕ್ಕ ರಂಗನೋಡು
ಈಠಕ್ಕ ಮಾಡಿಹ ಬಹು ಕೇಡು ಪ
ಪೆಟ್ಟಿಗೆಯೊಳು ದೇವರುಗಳು ಗಂಡಸ- |
ರಿಟ್ಟಿರಲವ ಅಂಜದಾಲೆ ||
ಮುಟ್ಟಿ ಮನೆಗೊಂದೊಂದೊಗೆದು ಮುರು-
ಬಟ್ಟಿ ಮಾಡಿಬಿಟ್ಟನಲ್ಲೆ 1
ತಾ ಕೆಡಿಸಿ ಒಡೆದಡಕಲಿ ಗಡಿಗೆಗಳನು |
ಆಕಳ ಒಳಘೊಗಿಸಿಹ್ಯನೂ ||
ಈ ಕರಕರೆಯರಿಯಳು ನಮ್ಮತೆಯೆಂ-
ಬಾಕೆನ್ನನು ಕೊಲ್ಲುವಳಲ್ಲೆ 2
ಅಡಕಲಿಯೊಳು ದೇವರ ತಾಳಿಯ ಸರ |
ತುಡುಗು ಮಾಡಿ ತಕ್ಕೊಂಡು ||
ಗಡಬಿಡಿ ಮಾಡೆಲ್ಲೊಗೆದನೊ ನಾ ಎ- |
ಷ್ಠುಡುಕಿದರೂ ಸಿಗವಲ್ಲೆ3
ನೆಲವಿಗೇರಿಸಿದ ಚಟ್ಟಿಗಿಗಳು ಒಂ- |
ದಳುಕದೆ ಮೊದಲಂತಿಹವೆ ||
ಇಳುಕಲು ಒಂದಕ್ಕೊಂದಕೆ ತೂತು |
ಪಾಲ್ಗಳು ಈಸನಿಲ್ಲವಲ್ಲೆ 4
ಅಡವಿಯ ದೇವರ ಹೆಸರಿಲಿ ತುಪ್ಪವ |
ಮಡಿಯ ಮಾಡಿ ತುಂಬಿರಲು ||
ಕುಡಿದು ಮುಚ್ಚಿ ಮೊದಲಪ್ಪಂದಿಟ್ಟಿಹ |
ಕೊಡದೊಳು ಬರಿ ನೀರಲ್ಲೇ 5
ಅಂಡಜವಾಹನಓಕಳಿ ಚಲ್ಲಿಹ |
ಪುಂಡತನದಿ ಮಂಚದ ಮೇಲೆ ||
ಭಂಡಿದು ಏನೆಂಧೇಳಲಿ ಮನೆಯೊಳು |
ಗಂಡನ ಸಿಟ್ಟು ನೀ ಬಲ್ಲೆಲ್ಲೆ 6
ಏನೆನರಿಯದವಳಿಗಿದು ಬಂದಿತು |
ಕ್ಷೋಣಿಯೊಳಗೆ ಒಣಹರಲೆ ||
ಮಾನನೀಯಳೆ ಈಪರಿಮಾಡಿ- |
ದನಿಕೋ ಪ್ರಾಣೇಶ ವಿಠಲನೀಗ 7
********
No comments:
Post a Comment