Monday, 11 November 2019

ಕೋಪವಿದೇಕೆ ಗೋಪಾಲಕ ರೂಪಮನದಿ ankita govinda

by ಗೋವಿಂದದಾಸ
ಕೋಪವಿದೇಕೆ ಗೋಪಾಲಕ |ರೂಪಮನದಿ |ಕಾಪಾಡು ನೀ ಕೃಪೆಯೊಳ್ ತಾಪಸರ | ಪಾಪಾರಿಯೆ ಪ

ಚದುರೆಯರ್ ವಿಧ ವಿಧ ದೂರುವದನಾಲಿಸುತ |ದಧಿಘೃತ ಕದ್ದನೆಂದು ಬೈದಳೇ ಯಶೋದೆ ನಿನ್ನ 1

ನಾರಿಯರ ಸೀರೆಯ ಕದ್ದು | ಏರಿದಾ ಮರವನೆಂದು |ದೂರುವುದಕೇಳಿಪಿತ | ಕ್ರೂರತ್ವವ ತೋರಿದನೇ ||ಕೋಪ| 2

ಚಂದದಿಂದ ಬಂದು ಎನ | ಗಿಂದು ದಯತೋರಿಸಯ್ಯಾ |ಸುಂದರಾಂಗಮೂರ್ತಿಗೋವಿಂದ ದಾಸರ್ವಂದಿತನೆ 3
*******

No comments:

Post a Comment