Wednesday, 16 October 2019

ಎಲ್ಲಿ ಸುವರಗಳು ಇಲ್ಲದಿದ್ದರೆ ಇವ ankita vijaya vittala

ಎಲ್ಲಿ ಸುವರಗಳು ಇಲ್ಲದಿದ್ದರೆ ಇವ |
ನಲ್ಲದೆ ಮತ್ತಾರಾ |
ವಲ್ಲಿ ಕಾಣದೆ ಪೋದೆ ಪ
ಸಾರುವ ಶರೀರ ಧರಿಸಿ ಬಾಳಿದ ಮಹಾ |
ಭಾರವಾಗಿದ್ದ ಪಾಷಾಣವ ಪೊತ್ತವ |
ಗೊರುವ ನೆಲನಂದು ಕಾಷ್ಟದಿಂದಲಿ ಬಂದ |
ಹಾರುವನಾಗಿ ತಿರದುಂಡು ಕುಲಧರ್ಮ |
ಮೀರಿ ನಡೆದವ ಉಪವಾಸದವÀನಿಂದ |
ಊರ ಎಂಜಲಿಗೆ ಹೇಸದೆ ಓಡಾಡಿದವ |
ನಾರಿಯರ ವ್ರತ ಕೆಡಿಸಿ ರಾವುತನಾಗಿ |
ಕಾಯ |
ಆರಿಂದ ಜನಿತನಿವ ನೋಡಲಾಗಿ |
ಧಾರುಣಿಯೊಳಗಿದ್ದವ ಸರ್ವರನ್ನ |
ಮೀರಿ ನಡೆತÀಲಿದ್ದವ ಇವಗೆ ಮೆಚ್ಚಿ |
ಧಾರಿ ಎಂದ ನಿನ್ನ ಮಗಳೆ ಬೇಕೆಂದವ 1

ಬಿರಿಗಣ್ಣೆನವನಿವ ಆವಾವ ಕಾಲಕ್ಕೆ |
ಶಿರವಾಗಿ ಕೊಂಡಿಪ್ಪ ಶೀಲ ಸ್ವಭಾವದಿ |
ಕೊರಳ ತಿರುಹಲಾರ ಕರುಳ ಮಾಲೆಯುವ |
ಪರರ ಬಾಗಿಲ ಕಾವರಾಜ್ಯವಿಲ್ಲದವ |
ಸುರರ ಕೋತಿಯ ಮಾಡಿ ಕುಣೆಸಾಡಿದವನಿವ |
ದಿಗಂಬರನಾಗಿ ಚರಿಸಿದೆನೆಂದು ಕೋಪದಿಂದ |
ಕರವಾಳ ಹಸ್ತದವ ||
ಪರಾಕ್ರಮ ಉರಗನ್ನ ಮೇಲಿದ್ದವ ಇವನ ಖೂನ |
ಅರಿಯನು ದಾವದಾವ | ಭೇದವನಿಕ್ಕಿ |
ತಿರುಗಿಸುವನು ಲೋಕವ ವಂಚಕನಿಗೆ |
ಪರಮ ಪ್ರೀತಿಯಿಂದ ಕೊಟ್ಟದನೆಣಿಸುವ 2

ತನ್ನ ಜಾತಿಗಳನ್ನು ನುಂಗುವನವನಿವ |
ಬೆನ್ನ ಮೇಲಿನ ಒಂದೆ ಬುಗುಟಿ ಪಲ್ಲಿನ ತುದಿ |
ಮಣ್ಣು ತೋರುವನಿವ ವಿಕಾರ ಮೊಗದವ |
ಕಣ್ಣು ಚುಚ್ಚಿದ ಒಬ್ಬ ಹಾರವನ್ನು ನೋಡಿ |
ಹೆಣ್ಣಿಗಭಯವಿತ್ತು ಕಾದಿ ಸೋತವನಿವ |
ರಣ್ಯ ವಾಗನಿವ ರಣದೊಳೋಡಿದನಿವ |
ಅನ್ಯಾಯ ಪೇಳಿದ ನಂಬಿದವರಿಗೆ |
ಮುನ್ನೆ ಕುದುರಿಯೇರಿದಾ ಇವನು ತಾನೆ |
ಅನಂತ ಮಾಯಮೋದಾ ಎಂಥವರಲ್ಲಿ |
ಪಾದ ಇಟ್ಟು ಇದ್ದು |
ಕಣ್ಣಿಗೆ ಪೊಳಿಯೆ ಖೇಡ ಬಡಿಸವಂಥ |
ಬಣ್ಣಾಣಿಗಾರನು ಬಂದೆಲ್ಲಿ ದೊರಕಿದಾ 3

ಮೀಸಿ ಕಟ್ಟಿಸಿಕೊಂಡಿವನೀವ ಪ್ರಳಯಾದಿ |
ದ್ವೇಷವನಿಕ್ಕಿದ ದೇವದಾನವರಿಗೆ |
ಏಸು ದಿವಸವಾಗೆ ಅದೋ ದೃಷ್ಠಾಯವನಿವ |
ಭಿಕ್ಷೆ ಪಾತ್ರಿಯವ |
ಬಿಗಿಯನೆ ಮುರದು ಬಿಟ್ಟವನಿವ |
ಕೊಂಡ ಲಜ್ಜೆಗೇಡಿ |
ಘಾಸೆತನಕೆ ಶೂರನು ಒಮ್ಮ್ಯಾದರು ||
ಮಾಡುತಲಿಪ್ಪನು ಇವನು ಹೆಣ್ಣು |
ವೇಷ ಧರಿಸಿಕೊಂಬನು ಕೇವಲ ಅವ |
ಕಾಶ ಯಿಲ್ಲದ ಸ್ಥಾನದಲ್ಲಿ ವೊಂದಿಪ್ಪನು 4

ದೃಷ್ಟಿ ಮುಚ್ಚದಿಪ್ಪನವನಿವ ಆವಾಗ |
ಬೆಟ್ಟವೆ ಗತಿ ಎಂದು ಸೇರಿಕೊಂಡವನಿವ |
ದಿಟ್ಟ ಕಠೀಣ ಕಾಯದವನಿವ ಎದುರಿಗೆ |
ಎಷ್ಟಗಲ ಬಾಯದೆರೆದಿಪ್ಪ ಪಾದದ |
ಬಟ್ಟಿನಿಂದಲಿ ನೀರು ಸುರಿಸುವ ಬಗೆ ಉಂಟು |
ಕುಟ್ಟಿ ಮಾತೆಯ ಶಿರ ಕೆಡಹಿದನಿವ ಜಡೆ |
ಗಟ್ಟಿಪ್ಪ ಚೋರನಾಯಕ ಮೌನಪ್ರಾಂತಕ್ಕೆ |
ದುಷ್ಟನೆನಸಿ ಮೆರೆವ ಹತ್ತದೆಂದು ||
ಅಟ್ಟಿಬಿಟ್ಟರೆ ಬರುವ ತನ್ನೆಲ್ಲಿಗೆ |
ಕೆಟ್ಟವರನ ಕರೆವ ಉತ್ತಮರನ್ನು |
ಪಟ್ಟದ ರಾಣಿಗೆ ಪೇಳದೆ ಜವಾ | 5

ಜಲದೊಳಗಾಡುವನಿವ ಹೊರೆ ಹೊತ್ತು |
ಕಲೆಪರಟಿಯಾಗಿ ತಿರುಗುವನಿವ ಮೂಗಿಲ್ಲಿ |
ಳಿದು ಬಂದವನಿವ ಗೊಗ್ಗರÀ ಧ್ವನಿಯವ |
ತಲುವರಿ ಇವ ತಾನೆ ಶಿಷ್ಯಗೆ ವಿದ್ಯವÀ |
ಕಲಿಸಿ ಶ್ಯಾಪವ ಕೊಟ್ಟನವನಿವ ವೈರತ್ವ |
ಬಳಸದವನ ಮೇಲೆ ಕಲ್ಲು ಹಾಕಿಸಿದವ |
ಬಲು ಭಂಡುಗೋವಳ ಅನ ಬರದದು ಬಿಟ್ಟು |
ಕಲಿಯಾಗಿ ಓಡಾಡಿದ |
ಹೆರರಿಗಾಗಿ ಸ್ತಳ ದ್ರವ್ಯವ ಮಾಡಿದಾ ದಾನವರಿಂದ |
ಬಲವಾವನು ಬೇಡಿದಾ ಬೊಮ್ಮಾಂಡದ |
ಒಳಗೆ ಹೊರಗೆ ಕಾಡಿದಾ |
ಬಹು ಠಕ್ಕನು |
ತಿಳಿದು ತಿಳಿದು ಈರ್ವರಿಗೆಯಲ್ಲಿ ನೋಡಿದಾ 6

ಸವಿ ನೋಡದದರ ರೂಪನಾದವನಿವ |
ಅವಯವಂಗಳೆಲ್ಲ ಮುದುರಿಕೊಂಡಿಪ್ಪಾನಿವ |
ಅವನಿಗೋಡಿ ಪೋದನಿವ ಮೃಗವಲ್ಲ ಮಾ |
ನವನಲ್ಲ ವದ್ಭೂತನಾಗಿ ತೋರುವನಿವ |
ಬವರಿಗಾದವನಿವ ತನ್ನ ಕಾಲಕೆ ತಪ್ಪ |
ಭವನವಿಲ್ಲದೆ ದಿನ ಕಳೆದವ ಯಾಗದ |
ನ್ನವನುಂಡು ನಾನಾ ಶಸ್ತ್ರವನ್ನು ನುಂಗಿದವನಿವ ||
ಯುವತಿ ಧರಿಸಿದ ಸಂಗಾ ಹಾ |
ರುವ ಪಕ್ಕಿ ದಿವಸ ದಿವಸ ತುರುಗಾನಾಗಿಪ್ಪದು |
ಅವಧೂತ ಮಾರ್ಗ ತುಂಗಾ |
ಪರ್ವತವನು |
ಲವಕಾಲಬಿಡದೆ ಬಾಯಲಿ ಕಚ್ಚಿದ ರಂಗಾ 7

ಮಾರಧ್ವಜನನವತಾರ ತಾಳಿದನಿವ |
ನೀರೋಳಗಡಿಗಿಪ್ಪ ಎರಡು ಭಾಗಗಲ್ಲಿ |
ಕೋರೆಗಳದ್ದಿ ಮಸÀದು ಮತ್ಸರಿಸುತಿಪ್ಪ |
ಚೀರಿ ಕೂಗುವ ಮಹಾ ಬೊಮ್ಮಾಂಡವಡದಂತೆ |
ಮೂರಡಿಯೊಳಗೆ ತ್ರಿಲೋಕವÀನಿಟ್ಟವ |
ಬೇರು ಕಡುವನಂತೆ ಕೊಡಲಿಕಾರನಿವ |
ಆರೋಗಣಿಗೆ ಶಬರಿಯ ಹಣ್ಣು ಮೆದ್ದವ |
ಬುದ್ಧ ಉದ್ದಂಡಾ ಏಕನು ಇವ ||
ಕೊಂಡ ಬಹು ಕಡೆ |
ಬೀರಿದನ್ನವ ಕೈಕೊಂಡಾ ಒಂದು ತುತ್ತು |
ಆರಗೀಯದಲೆ ಉಂಡಾ ಇವನನ್ನು |
ಹಾರೈಸಿದವರಿಗೆ ಏನು ಲಕ್ಷ ಹೆಚ್ಚಳ ಕಂಡಾ 8

ಉದಕ ಬಿಟ್ಟರೆ ಬದುಕಲಾರದವನಿವ |
ಎದೆಗಟ್ಟಿಯವನಲ್ಲಿ ಮುಟ್ಟಿ ನೋಡಿದರೆ |
ಪೊದೆ ಪೊದರಿನೊಳು ಸೇರಿ ಕೊಂಡವನಿವ |
ಎದುರಿಗೆ ಒಬ್ಬರ ಬರಗೊಡದವ ತನ್ನ |
ಪದದ ಕೆಳಗೆ ಕೊಟ್ಟವನ ಇಟ್ಟವನಿವ |
ಮದಕಾವ ಮಾಡಿ ತನ್ನೊಳು ತಾನೆ ಸೋತವ |
ಸುದತಿಯುಳಟ್ಟಿದ ಪಾರ್ಥಗಾಳಾದ |
ಚದುರ ಕ್ರೂರರಿಗೆ ಕ್ರೂರಾ ನಿರಂತರ |
ಉದಧಿ ಎಂಬೊದೆ ಮಂದಿರಾ ಇವಗೆ ನೋಡು |
ಬದರಿ ಗಿಡವೆ ಆಸರಾ ಏನೆಂಬೆನೊ |
ಕದರು ಮೋರಿಯೆ ಶೃಂಗಾರ ತನ್ನಯ ಗುಣ |
ಮೊದಲಿದೆ ಕಡೆ ಎಂದು ಆರಾರಿಗೆ ತೋರಾ 9

ಚಪಲಾಕ್ಷದವನಿವ ಚಲುವನೆಂತೆಂಬೆನೆ |
ವಿಪರೀತ ನಿದ್ರೆ ಮಾಡುವನಿವ ಕರೆದರೆ |
ಕುಪಿತವಾಗುವ ಕಿಡಿ ಉಗುಳುವನಿವ |
ಕಪಟದಲ್ಲಿ ಗಟ್ಟಿ ತಲೆ ಹೊಡಕ ರಾಮ |
ಕಪಿಯ ಮೋಸದಿಂದ ಕೆಡಹಿದ ಮಾವನ್ನ |
ನಿಪತನ ಗೈಸಿದ |
ದೋಷಕ್ಕೆ ಶಂಕಿಸಾ |
ತ್ರಿಪುರವ ಕೆಡಸಿದ ಹರಗೆ ಸಾಯುಕವಾಗಿ |
ಅಪಕಾರಿ ಝಗಳಗಂಟ ಒದಿಸಿಕೊಂಡ ||
ವಿಪುಳದೋಳೇನು ಒಂಟಾ ಉಚ್ಚರಿಸುವೆ |
ಕೃಪಣ ಜನರಿಗೆ ನೆಂಟಾಸನಕ್ಯಾದರ |
ಶಪತದಲ್ಲಿಗೆ ಪೊರವಂಟಾ ಉತ್ತಮರಿಂದ |
ಉಪದೇಶವಿಲ್ಲದ ಬಾಳುವ ಮಹಾತುಂಟಾ 10

ಇವರೀರ್ವರಿಗೆ ಈಡೆ ತಪ್ಪಿಸಲು ಪದ್ಮ |
ಭವಗಳವಲ್ಲವು ನಿನ್ನ ಕುವರಿಗೆ |
ಸವಿಗಾರ ಇವನಲ್ಲದೆ ಮತ್ತಾವಾವಾ |
ವಿವರಿಪೆ ಎಂಥವರಕೆ ಅಂಥ ಕನ್ನಿಕೆ |
ಹವಣವಾಗಿದೆ ಸತ್ಯ ಸಂಕಲ್ಪವೆ ಸಿದ್ಧಾ |
ಶ್ರವಣಾದಿ ಇಂದ್ರಿಂಗಳಿಗಗೋಚರಾ |
ಸ್ಥವಿರ ಯೌವನ ಬಾಲ ಒಂದಾದರಿವನೆಲ್ಲಾ |
ನವನವ ಬಗೆ ಸುಕಾಯಾ || ಮೋಹನ್ನ ಯಾ |
ದವರಾಯಾ ಶಿರಿ ವಿಜಯವಿಠ್ಠಲ ಕೃಷ್ಣ |
ಶಿವಕುಲ್ಲ್ಯ ಪುರಿ ನಿಲಯಾ ಭಕ್ತರ ಪ್ರೀಯಾ |
ಮಾಯಾ ಜಗದ್ಗುರು |
ಪವನವತಾರ ಶ್ರೀ ಆನಂದ ಮುನಿಗೇಯಾ11
**********

No comments:

Post a Comment