Thursday 17 October 2019

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ ಅಭಿವಂದಿಸುವೆನೊ ankita vijaya vittala

ವಿಜಯದಾಸ
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ |
ಅಭಿವಂದಿಸುವೆನೊ ಜೀಯ್ಯಾ ಪ

ಕರವ ಜೋಡಿಸಿ ಬಿನ್ನೈಪಾ ||
ದುರಿತ ರಾಶಿ |
ಪರಿಹಾರ ಮಾಡಿಸಯ್ಯಾ 1
ಮಾರುತಿ ಸದಾಗತಿ ಭಾರತೀಪತಿ ಯತಿ |
ಮಾರಾರಾತಿಗೆ ನೀ ಗತಿ ||
ಮಾರಿಗಳಿಗೆ ನಿರುತ ಮಾರಕ ನೀನಹುದೋ2

ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ |
ಸಾಯುಜ್ಯ ಸಾರೂಪ್ಯನೆ ||
ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |
ಈ ಯುಗದೊಳು ಬಲವಾಗೋ 3

ಕಾಯ ನಿನ್ನದು ಗುಣನಿ |
ಕಾಯ ನಿರ್ದೋಷ ಕಾಯಾ ||
ಕಾಯಾ ಐದಳಮಾನ | ಕಾಯ್ದ ಕಲಿವೈರಿ |
ಕಾಯಜಪಿತನ ದೂತಾ 4

ಪಂಕಜನಾಭನ ಅಂಕದಲ್ಲಿಪ್ಪ
ಬಿಂಕವ ತಾಳದಿರೊ |
ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ
ತ್ಪಂಕದೊಳು ತೋರಿಸೊ 5
*******

No comments:

Post a Comment