Thursday, 17 October 2019

ಜೋಕುಮಾರನೆಂದು ಪಾಡಿದಳೊ ಗೋಪಿ ankita vijaya vittala

ವಿಜಯದಾಸ
ರಾಗ - : ತಾಳ - 

ಜೋಕುಮಾರನೆಂದು ಪಾಡಿದಳೊ
ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ll ಪ ll

ಬಾಯಲ್ಲಿ ಬೆಣ್ಣೆ ಬಗೆಬಗೆ ವೈಯ್ಯಾರ
ಕಾಯ ನೋಡಿದರದು ಬಲು ಕಪ್ಪು
ಮಾಯದ ವೇಶದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ ll 1 ll

ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ ll 2 ll

ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು  ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಟ್ಠಲರೇಯಾ
ಸೊಟ್ಟವಳನ ಬಿಡದಿಪ್ಪಕುವಲ್ಲಭಾ
***

ಜೋಕುಮಾರನೆಂದು ಪಾಡಿದಳೊ
ಗೋಪಿ ಪ

ಮಾಯದ ವೇಷದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ 1

ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ 2

ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ3
**********

No comments:

Post a Comment