Thursday 17 October 2019

ದೇವಿ ಕಾರುಣ್ಯದಿಂದ ಬಂದು ಎಂದೆಂದು ankita vijaya vittala

ದೇವಿ ಕಾರುಣ್ಯದಿಂದ ಬಂದು ಎಂದೆಂದು
ಬಿಡದೆಂದು ದಯದಿಂದ ಪಾಲಿಸಿ ನಿಂದು ಪ

ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ
ನಮೋ ನಮೋ ರಮೆ ಉತ್ತಮೆ ಅನುಪಮೆ
ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ
ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ1

ಲೋಕ ತರುವಾತ ತನಯವಾಕು ಇವು ಮೂರು ಬೇಕು
ಪರಾಕು ಸಂತಾಪ ನೂಕು
ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು
ಶೋಕ ಓಡಿಸಿ ಎನ್ನ ಸಾಕು ನೀ ಮನಸು ಹಾಕು2

ರಂಗನ ಅರ್ಧಾಂಗಿ ನೀ ರನ್ನೆ ಕ್ಷೀರಾಬ್ದಿ ಕನ್ಯೆ
ಮಂಗಳಾದೇವಿ ಭಾಗ್ಯ ಸಂಪನ್ನೆ ಭಕ್ತ ಸಂಪನ್ನೆ
ತುಂಗ ಗುಣಾಬ್ಧೆ ತರಂಗಳೆ ತರುಣ ಪ್ರಕಾಶಿಸು
ಸಿರಿ ವಿಜಯವಿಠ್ಠಲನ್ನ ವಕ್ಷಸಾರಿದ ಸಾಕ್ಷಾದ್ದೇವಿ 3
**********

No comments:

Post a Comment