Wednesday, 16 October 2019

ನೋಡಿದೆನು ಯಾದವ ಕೃಷ್ಣನ ಪಾಡಿದೆನೊ ankita vijaya vittala

ವಿಜಯದಾಸ
ನೋಡಿದೆನು ಯಾದವ ಕೃಷ್ಣನ |
ಪಾಡಿದೆನೊ ಮನದಣಿಯ ವರಗಳ |
ಬೇಡಿದಾಕ್ಷಣ ಕೊಡುವ ಜಗತ್ರಯ |
ವಾಡಿಸುವ ವಾಗೀಶ ಜನಕನ ಪ

ಮೇದಿನಿ ಪ್ರ |
ಹ್ಲಾದ ಸುರಪನ ಕಾದ ವಂಶವ |
ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ |
ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ |
ಬಾದರಾಯಣ ದತ್ತ ವೈಕುಂಠ |
ಬೋಧ ಮೂರುತಿ ಕಪಿಲ ನಾನಾ ವಿ |
ನೋದ ರೂಪದ ಆದಿ ದೈವವ 1

ಜನನಿಗಾಟವ ತೋರಿ ಕಡಗೋ |
ಲನು ನೇಣರು ಕರದಲಿ ಪಿಡಿದು | ರು
ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು |
ಗೋಪಿ ಚಂ |
ದನದೊಳಡಗಿ ಅಲ್ಲಿಂದ ಆನಂದ |
ಮುನಿಗೊಲಿದು ಬಲು ವೇಗ ಪಡುವಣ |
ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ 2

ಸುತ್ತ ಯೋಜನ ಕ್ಷೇತ್ರವಿದರೊಳು |
ಉತ್ತಮ ವಿಮಾನ ವೇದ ಪ |
ರ್ವತಗಳು ಅಲ್ಲೆಲ್ಲಿ ಸರೋವರ |
ಕತ್ತಲಿಗಭಿಮಾನಿನಿ ದುರ್ಗಾ |
ದುರಿತ ಪರಿಹರ |
ಸೋತ್ತಮರಿಗಿದು ಸಿದ್ಧ ಸರ್ವದ |
ತತ್ತಳಿಪ ಪರತತ್ವ ಹರಿಯ3

ತಂತ್ರ ಸಾರೋಕ್ತದಲಿ ಪೂಜೆ ನಿ |
ರಂತರದಿ ಕೈಗೊಂಬ ಬಲು ಗುಣ |
ವಂತ ನೀತನ ಹೊಳವು ಪೊಗಳಿದ |
ರಂತ ಗಾಣವು ಶ್ರುತಿ ಪುರಾಣಗ |
ಳೆಂತು ಪೇಳಲಿ ಮೆರೆವ ವೈಭವ |
ಸಂತರಿಗೆ ಅತಿ ಪ್ರಿಯನಾಗಿಪ್ಪ |
ನಿತ್ಯ ಸ್ವಾತಂತ್ರ ಪುರುಷನ 4

ಮಕರ ತಿಂಗಳು ಮೊದಲು ಪಕ್ಷದ |
ಲಕುಮಿರಮಣನ ದಿವಸದಲ್ಲೀಗ |
ಭಕುತಿಯಿಂದಲಿ ಬಂದು ವಂದಿಸಿ |
ಅಕುಟಿಲರ ವೊಡಗೊಡಿ | ನಿಂದು ಗೋ |
ಳಕವ ಚಿಂತಿಸಿ ಸ್ನಾನ ಒಂದೆ |
ಸುಖ ತೀರ್ಥ ಸರೋವರದಲಿ ಮಾಡೆ |
ಮುಕುತರೊಳು ಪೊಂದಿಸುವ ದಾತನ 5

ಶುಕ್ರವಾರದ ಪೂಜೆ ನೋಡಲು |
ವಕ್ರಗತಿಗಳು ಮುಟ್ಟಲಂಜೊವು |
ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು |
ಶುಕ್ರ ದೇವಸ್ಥಾನದೊಳು ಕಾ |
ಲಕ್ರಮಣ ಮಾಡೆ | ಗೋತ್ರದೊಡನೆ ಪೂ
ರ್ಣ ಕ್ರೀಡೆÀಯಾಡಿಸುತ ಸಲಹುವ |
ಚಕ್ರಧರ ಅಕ್ರೂರ ವರದನ 6

ಕಣಿಸಿ ಉಡಿಸುವ ಕುಣಿಸಿ ನೋಡುವ |
ಕನಸಿನೊಳಗಾವಾಗ ತನ್ನನು |
ಮನಸಿನಲಿ ಕ್ಷಣ ಬಿಡದೆ ಗುಣಗಳ |
ಎಣಿಸಿ ಮೈ ಮರೆದಡಿಗಡಿಗೆ ಈ |
ತನುವೆ ನಿನ್ನಾಧೀನವೆಂದಾ |
ಜನರಿಗಪವಾದ ಬರಲೀಸನು |
ದನುಜದಲ್ಲಣ ವಿಜಯವಿಠ್ಠಲನ್ನ 7
***********

No comments:

Post a Comment