ನಂಬಿದೆನೊ ನಿನ್ನ ಪಾದಾರವಿಂದಾ
ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ
ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು
ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ
ಉಳಿವದಕುಪಾಯವನು ಒಂದರೆ ಕಾಣೆನೊ
ಎಲೊ ಬಲುದೈವ ನೀನೆ ದಯಾಳು ಎಂದೂ 1
ಕೈವಲ್ಯ ಕೊಡುವಲ್ಲಿ
ಮಂಡಲದೊಳು ಎಣಿಯಾರು ನಿನಗೆ
ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು
ನಿತ್ಯ ಎಳೆನೋಟದಲಿ ನೋಡು 2
ಯದುಕುಲಲಲಾಮ ಸುರಸಾರ್ವಭೌಮ ಮಹಿಮ
ಮದನಪಿತ ಕಾಳಿಂಗಭಂಗ ರಂಗಾ
ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ
ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
***********
ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ
ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು
ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ
ಉಳಿವದಕುಪಾಯವನು ಒಂದರೆ ಕಾಣೆನೊ
ಎಲೊ ಬಲುದೈವ ನೀನೆ ದಯಾಳು ಎಂದೂ 1
ಕೈವಲ್ಯ ಕೊಡುವಲ್ಲಿ
ಮಂಡಲದೊಳು ಎಣಿಯಾರು ನಿನಗೆ
ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು
ನಿತ್ಯ ಎಳೆನೋಟದಲಿ ನೋಡು 2
ಯದುಕುಲಲಲಾಮ ಸುರಸಾರ್ವಭೌಮ ಮಹಿಮ
ಮದನಪಿತ ಕಾಳಿಂಗಭಂಗ ರಂಗಾ
ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ
ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
***********
No comments:
Post a Comment