Monday 20 December 2021

ಮೂರು ನಾಮಗಳ ಧರಿಸಿದ ಕಾರಣವೇನು ankita gopala vittala MOORU NAAMAGALA DHARISIDA KAARANAVENU




raga ರೇವತಿ tala ರೂಪಕ  







ಮೂರು ನಾಮಗಳ ಧರಿಸಿದ  ಕಾರಣವೇನು
ಸಾರಿ ಪೇಳಲೋ ಈಗಲೇ||pa||

ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರೊ ನಿನಗೆ ಮೂರು ನಾಮಗಳ |a.pa|

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |
ಶುದ್ಧ ಪಾದಕೆ ಎರಗಿ ಕರವ ಮುಗಿದು |
ಎದ್ದು ನೋಡಲು ನಿನ್ನ ಪಣೆಯೊಳೀಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ||1||

ಸಾಲದೆ ನಿನ್ನ ಸೌಂದರ್ಯಕ್ಕೆ ಒಂದು ತಿಲಕ |
ಪಾಲಸಾಗರಶಾಯಿ ಚೆಲುವಮೂರ್ತಿ|
ಕಾಲಕಾಲಕೆ ಬರುವ ಭಕುತಜನಗಳ ವೃಂದ |
ದೃಷ್ಟಿತಾಕುವುದೆಂಬ ತೋರುವ ಬಗೆಯೊ||2||

ಮೂರು ಲೋಕಗಳಿಹವು ಮೂರುರೂಪನ ನಾನು|
ಮೂರು ಮಾಳ್ಪೆನು ಜಗವ ಮೂರು ಗುಣದಿ |
ಮೂರು ತಾಪವಗೆದ್ದು ಮಾರ್ಗದಿ ಭಜಿಸೆ|
ಪಾರು ಮಾಡುವೆನೆಂದು ತೋರುವ ಬಗೆಯೊ ||3||

ಮೂರೆರಡು ಎರಡೊಂದು ಇಂದ್ರಿಯ ವರ್ಜಿಸಲು |
ತೋರುವನು ನಿಜರೂಪ ಭಕ್ತನೆಂದು|
ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದಗೆ |
ಮೂರುನಾಮಗಳೆ ಗತಿ ಎನುವ ಬಗೆಯೋ||4||

ಶ್ರೀಲೋಲ ಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೊ|
ವಾಸಶಯನ ವೆಂಕಟೇಶನೆ ಎನ್ನ ಮನಕೆ|
ಕಾಲಕಾಲಕೆ ನಿನ್ನ ಲೀಲೆಗಳ ತೋರೋ||5||
***

Muru namagala dharisida karanavenu
Sari pelalo igale||

Sri ramapati srinivasa venkataramana
Yaru ittaro ninage muru namagala |

Suddha vaishnavarella Suddha muruti endu |
Suddha padake eragi karava mugidu |
Eddu nodalu ninna paneyolipari iralu
Madhvamatada daivavendu ninna kareyuvare||

Salade ninna saundaryakke ondu tilaka |
Palasagarasayi celuvamurti|
Kalakalake baruva bakutajanagala vrunda |
Drushtitakuvudemba toruva bageyo||

Muru lokagalihavu mururupana nanu|
Muru malpenu jagava muru gunadi |
Muru tapavageddu margadi Bajise|
Paru maduvenendu toruva bageyo ||

Mureradu eradondu indriya varjisalu |
Toruvanu nijarupa Baktanendu|
Saruttiddaru vayu ariyade Bajisidage |
Murunamagale gati enuva bageyo||

Srilola krushna gopalavithala ninna
I bageya lilegala arivaryaro|
Vasasayana venkatesane enna manake|
Kalakalake ninna lilegala toro||
***



by ಅಂಬಾಬಾಯಿ
ಮೂರು ನಾಮಗಳ ಧರಿಸಿರುವ ಕಾರಣವೇನು
ಸಾರಿ ಪೇಳಲೊ ಈಗಲೆ ಪ.

ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ.

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು
ಕರವ ಮುಗಿದು
ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು
ಮಧ್ವಮತ ದೈವವೆಂದಿನ್ನು ತಿಳಿಯುವರೆ 1

ಮೂರುರೂಪನು ನಾನು ಮೂರು ಲೋಕಗಳಿಹವು
ಮೂರು ಮಾಳ್ಪೆನು ಜಗವ ಮೂರು ಗುಣದಿ
ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ
ಪಾರು ಮಾಡುವೆನೆಂದು ತೋರುವ ಸೊಬಗೊ 2

ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ
ಪಾಲಸಾಗರಶಾಯಿ ಚಲುವಮೂರ್ತಿ
ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು
ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3

ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು
ತೋರುವನು ನಿಜರೂಪ ಭಕ್ತಗೆಂದು
ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ
ಮೂರುನಾಮವೆ ಗತಿ ಎನ್ನುವ ಬಗೆಯೊ 4

ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ
ಈ ಲೀಲೆ ಬಗೆಯನು ಅರಿವವರ್ಯಾರೊ
ವ್ಯಾಳಶಯನ ವೆಂಕಟೇಶ ಎನ್ನ ಮನದಿ
ಕಾಲಕಾಲಕೆ ನಿನ್ನ ರೂಪವನೆ ತೋರೋ 5
****

Muru namagala dharisida karanavenu
Sari pelalo igale||

Sri ramapati srinivasa venkataramana
Yaru ittaro ninage muru namagala |

Shuddha vaishnavarella Shuddha muruti endu |
Shuddha padake eragi karava mugidu |
Eddu nodalu ninna paneyolipari iralu
Madhvamatada daivavendu ninna kareyuvare ||

Salade ninna saundaryakke ondu tilaka |
Palasagarasayi celuvamurti |
Kalakalake baruva bakutajanagala vrunda |
Drushtitakuvudemba toruva bageyo ||

Muru lokagalihavu mururupana nanu |
Muru malpenu jagava muru gunadi |
Muru tapavageddu margadi Bajise |
Paru maduvenendu toruva bageyo ||

Mureradu eradondu indriya varjisalu |
Toruvanu nijarupa Baktanendu |
Saruttiddaru vayu ariyade Bajisidage |
Murunamagale gati enuva bageyo ||

Srilola krishna gopalavithala ninna
I bageya lilegala arivaryaro |
Vasasayana venkatesane enna manake |
Kalakalake ninna lilegala toro ||
***

ಮೂರು ನಾಮಗಳ ಧರಿಸಿರುವ ಕಾರಣವೇನು

ಸಾರಿ ಪೇಳಲೊ ಈಗಲೆ ಪ.


ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ

ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ.


ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು

ಬಿದ್ದು ಪಾದಕೆ ನಮಿಸಿ ಕರವ ಮುಗಿದು

ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು

ಮಧ್ವಮತ ದೈವವೆಂದಿನ್ನು ತಿಳಿಯುವರೆ 1

ಮೂರುರೂಪನು ನಾನು ಮೂರು ಲೋಕಗಳಿಹವು

ಮೂರು ಮಾಳ್ಪೆನು ಜಗವ ಮೂರು ಗುಣದಿ

ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ

ಪಾರು ಮಾಡುವೆನೆಂದು ತೋರುವ ಸೊಬಗೊ 2

ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ

ಪಾಲಸಾಗರಶಾಯಿ ಚಲುವಮೂರ್ತಿ

ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು

ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3

ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು

ತೋರುವನು ನಿಜರೂಪ ಭಕ್ತಗೆಂದು

ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ

ಮೂರುನಾಮವೆ ಗತಿ ಎನ್ನುವ ಬಗೆಯೊ 4

ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ

ಈ ಲೀಲೆ ಬಗೆಯನು ಅರಿವವರ್ಯಾರೊ

ವ್ಯಾಳಶಯನ ವೆಂಕಟೇಶ ಎನ್ನ ಮನದಿ

ಕಾಲಕಾಲಕೆ ನಿನ್ನ ರೂಪವನೆ ತೋರೋ 5

****


No comments:

Post a Comment