Monday 20 December 2021

ಬಾಣನ ಭಂಗಿಸಿದಂತಾ ಭಾವಜನಯ್ಯನೆ purandara vittala BAANANA BHANGISIDANTA BHAAVAJANAYYANE


time 0.21






ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ
ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ ||

ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ
ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ ||

ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲಭನಾಭನೆ ಬಾರೋ
ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ || ೨ ||

ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ
ಕುಂದದೆ ಗೋವುಗಳ ಕಾಯಿದ ಪುಂಡರೀಕಾಕ್ಷನೆ ಬಾರೋ || ೩ ||

ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ
ಈರೇಳು ಭುವನನ ಕಾಯುವ ಮಾರಯ್ಯನೆ ಬಾರೋ || ೪ ||

ಶೇಷ ಶಯನ ಮೂರುತಿಯಾದ ವಾಸುದೇವನೆ ಬಾರೋ
ದಾಸರೊಳು ದಾಸನಾದ ಪುರಂದರವಿಠಲನೆ ಬಾರೋ || ೫ ||
***

ರಾಗ ಶಂಕರಾಭರಣ/ಆದಿ ತಾಳ (raga, taala may differ in audio)

pallavi

vENu nAda bArO shrI vEnkaTaramaNane bArO bANana bhangisidantha bhAva janayyane bArO

caraNam 1

bhUtaniya moleyuNDa navanIta cOrane bArO bhIta rAvaNana samharisida sItAnAyakane bArO

caraNam 2

billa muridu mallara gedde pulla nAbhena bArO gollatEroDane naliva celuva mUruti bArO

caraNam 3

mandaragiri ettidantha indira ramaNane bArO kundade gOvugaLa puNDrIkAkSane bArO

caraNam 4

nAriyara manage pOguva vArija nAbhane bArO irELu bhuvanava kAyuva mAranayyane bArO

caraNam 5

shESa shayana mUrutiyAda vAsudEvane bArO dAsaroLu dAsanAda purandara viTTala bArO
***

pallavi

vENu nAda bArO shrI vEnkaTaramaNane bArO bANana bhangisidantha bhAva janayyane bArO

caraNam 1

bhUtaniya moleyuNDa navanIta cOrane bArO bhIta rAvaNana samharisida sItAnAyakane bArO

caraNam 2

billa muridu mallara gedde pulla nAbhena bArO gollatEroDane naliva celuva mUruti bArO

caraNam 3

mandaragiri ettidantha indira ramaNane bArO kundade gOvugaLa puNDrIkAkSane bArO

caraNam 4

nAriyara manage pOguva vArija nAbhane bArO irELu bhuvanava kAyuva mAranayyane bArO

caraNam 5

shESa shayana mUrutiyAda vAsudEvane bArO dAsaroLu dAsanAda purandara viTTala bArO
~*~

ಬಾಣನ... -- ಬಲಿಚಕ್ರವರ್ತಿಯ ಮಗನಾದ ಬಾಣಾಸುರನ ಮಗಳಾದ ಉಷೆಯನ್ನು, ಅನಿರುದ್ಧನು (ಕೃಷ್ಣನ ಮಗ ಪ್ರದ್ಯುಮ್ನ, ಅವನೇ ಮನ್ಮಥ, ಭಾವಜ; ಅವನ ಮಗ ಅನಿರುದ್ಧ) ಕದ್ದೊಯ್ದು ಮದುವೆಯಾದದ್ದು ಇಲ್ಲಿನ ಸಂದರ್ಭ.

ಬಿಲ್ಲ ಮುರಿದು... - ಕಂಸನ ಆಸ್ಥಾನದಲ್ಲಿ.
ಗೊಲ್ಲತೇರೊಡನೆ -- ಗೊಲ್ಲತಿಯರೊಡನೆ ; ಕವಾಡಿಗರ ಹೆಂಗೆಳೆಯರನ್ನು ಕೂಡಿಕೊಂಡು.
ಈರೇಳು ಭುವನನ - ಹದಿನಾಲ್ಕು ಲೋಕಗಳನ್ನು.
*************


ಬಾಣನ ಭಂಗಿಸಿದಂತಾ...
ಭಾವಜನಯ್ಯನೆ ಬಾರೋ...||ಬಾಣನ||
ವೇಣುನಾದ ಬಾರೋ.. 
ವೆಂಕಟರಮಣನೆ ಬಾರೋ||ವೇಣು||

ಪೂತನಿಯ ಮೊಲೆಯುಂಡಾ...
ನವನೀತ ಚೋರನೆ ಬಾರೋ||ಪೂತನಿಯ||
ಭೀತ ರಾವಣನ ಸಂಹರಿಸಿದ 
ಸೀತನಾಯಕ ಬಾರೋ||ಭೀತ||
                        ||ವೇಣುನಾದ ಬಾರೋ||

ಬಿಲ್ಲ ಮುರಿದು ಮಲ್ಲರ ಗೆದ್ದ 
ಪುಲ್ಲನಾಭನೆ ಬಾರೋ||ಬಿಲ್ಲ||
ಗೊಲ್ಲ ತೇರೊಡನೆ ನಲಿವಾ
,ಚೆಲುವ ಮೂರುತಿ ಬಾರೊ||ಗೊಲ್ಲ||
                      ||ವೇಣುನಾದ ಬಾರೋ||

ಮಂದರಗಿರಿ ಎತ್ತಿದಂತಾ
ಇಂದಿರೆ ರಮಣನೆ ಬಾರೋ||ಮಂದರಗಿರಿ||
ಕುಂದದೆ ಗೋವುಗಳ ಕಾಯ್ದ 
ಪುಂಡರಿಕಾಕ್ಷನೆ ಬಾರೊ||ಕುಂದದೆ||
                     ||ವೇಣುನಾದ ಬಾರೋ||

ನಾರಿಯರ ಮನೆಗೆ  ಪೋಗುವ 
ವಾರಿಜನಾಭನೆ ಬಾರೋ||ನಾರಿಯರ||
ಈರೇಳು ಭುವನವ ಕಾಯುವ
ಮಾರನಯ್ಯನೆ ಬಾರೋ||ಈರೇಳು||
                    ||ವೇಣುನಾದ ಬಾರೋ||

ಶೇಷಶಯನ ಮೂರುತಿಯಾದ 
ವಾಸುದೇವನೆ ಬಾರೋ||ಶೇಷ||

ದಾಸರೊಳು ದಾಸನಾದಾ...ಆ..
ಆಆ...ಆ.....ಆಆಆ..ಆಆ...
ದಾಸರೊಳು ದಾಸನಾದ 
ಪುರಂದರವಿಠ್ಠಲ ಬಾರೋ||ದಾಸರೊಳು||
                   ||ವೇಣುನಾದ ಬಾರೋ||
                  ||ಬಾಣನ ಭಂಗಿಸಿದಂತಾ||
*******

ಪುರಂದರದಾಸರು

ವೇಣುನಾದ ಬಾರೊ ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪ

ಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1

ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2

ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3

ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4

ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
*********

No comments:

Post a Comment