ಬಂದ ಕೃಷ್ಣ ಚೆಂದದಿಂದ ಕೊಳಲನೂದುತ ||ಪ||
ಮಂದಹಾಸ ಬೀರಿ ಸುಜನ ವೃಂದ ನೋಡುತ ||ಅ.ಪ||
ಹೃದಯದಾರ್ತಿ ನೀಗಿ ಮನಕೆ ಮುದವ ತೋರುತ
ಸದಯ ಹೃದಯ ಬದಿಗನಾಗಿ ಅಭಯ ನೀಡುತ ||೧||
ತುಡುಗ ತಾನು ಪಿಡಿದ ಕೊಳಲಬೆಳಕ ಮಾಡುತ
ಹುಡುಗ ತಾನು ಕಂಡು ಕಾಣದ್ಹಾಂಗೆ ತೋರುತ ||೨||
ಸೇವ್ಯ ಮಾನ ಮಾನಸಾಂದ ಮಾನಸಾಂಡಂ
ಕಾವ್ಯಭೋದಿ ಗುರು ಗೋವಿಂದವಿಠಲ ವ್ಯಕ್ತಂ ||೩||
Banda krishna chendadinda kolalanuduta ||pa||
Mandahasa biri sujana vrunda noduta ||a.pa||
Hrudayadarti nigi manake mudava toruta
sadaya hrudaya badiganagi abhaya niduta ||1||
Tuduga tanu pidida kolalabelaka maduta
huduga tanu kandu kanadhange toruta ||2||
Sevya mana manasanda manasandam
kavyabhodi guru govinda vittala vyaktam ||3||
***
No comments:
Post a Comment