Wednesday, 1 September 2021

ಉಸರಬಹುದೆನೆಗೆ ಕೃಷ್ಣ ಬಾಗಿಲಲಿ ನಸು ನಗುತ ನಿಂತ ಬಗೆಯು ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಉಸರಬಹುದೆನೆಗೆ ಕೃಷ್ಣ ಬಾಗಿಲಲಿ

ನಸು ನಗುತ ನಿಂತ ಬಗೆಯು ಪ


ತಿಳಿದು ಪೂಜೆಯು ಮಾಡುವ ಭಕುತರನು

ಬಳಿಗೆ ಕರೆವುದು ತೀವ್ರವೊ

ಖಳಕುಲದ ಜನರು ಬರಲು ಹೋಗೆಂದು

ಕಳುಹುವ ಬಗೆಯ ಏನೊ ಕೃಷ್ಣ 1


ಸುಳಿದ ಜನಗಳ ಕೂಡ ಸುಂಕವನು

ಸೆಳೆಕೊಂಬ ಬಗೆಯು ಏನೊ

ಕೆಳದಿಯರ ಬಂದವರನಾ ಮೋಹಿಸಿ

ಕೊಳಲನೂದುತಲಿ ನಿಂದಿಯೊ ಕೃಷ್ಣ 2


ಬಲಿಯ ಕಾಯಿದ ಬಗೆಯಲಿ ದಾಸರನ

ಚಲಿಸದಲೆ ಕಾವ ಬಗಿಯೊ

ನೆಲೆ ವಾಸುದೇವವಿಠಲ ಭಕುತನ್ನ

ಸಲಿಗೆ ಬಿನ್ನಪ ಸಲಿಪುದೊ 3

***


No comments:

Post a Comment