..
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ
ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ
ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1
ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ
ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2
ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ
ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3
ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ
ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4
ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ
ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5
ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ
ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6
ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ
ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7
ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು
ತಾನೆಲ್ಲಿ ಪೋದರೇನು | ಆ ನರಗೆ ಉಂಟೆ ಮೋದ 8
ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ
ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
***
No comments:
Post a Comment