..
ಜೋ ಜೋ ಜೋ ಜೋ ಸಹ್ಲಾದರಾಜ
ಜೋ ಜೋ ಜೋ ಜೋ ಪ್ರಹ್ಲಾದನನುಜ
ಜೋ ಜೋ ಜೋ ಜೋ ಜಾತರೂಪ ಶಯ್ಯಜ
ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ
ಮನುಜ ಮೃಗಾರ್ಯರ ಸುತನೆನಿಸಿಸುತ
ಅಣುಗ್ರಾಮ ಬ್ಯಾಗವಾಟದಿ ಜನಿಸುತ
ಮುನಿ ವರದೇಂದ್ರತೀರ್ಥರ ಸೇವಿಸುತ
ಅನಿಲ ಸುಶಾಸ್ತ್ರವನರಿತ ಸುದಾತ 1
ಗುರುಧೇನುಪಾಲ ದಾಸಾರ್ಯರ ಮಮತ
ಪರಿಪೂರ್ಣದಿಂದ ನೀ ಪರಮ ಪುನೀತ
ಸಿರಿಜಗನ್ನಾಥವಿಠಲಾಂಕಿತ
ಶರಧಿಜ ಭಾಗದಿ ಪಡೆದ ಪ್ರಖ್ಯಾತ 2
ಸರಸಿಜ ತುಲಸಿ ಸುಮಾಲೆ ಶೋಭಿತ
ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ
ಹರಿಕಥಾಮೃತ ಗ್ರಂಥ ವಿರಚಿತ
ಪುರುಹೂತರಾರ್ಯರ ಪ್ರೇಮದ ಪೋತ 3
ಗುಣನಿಧಿ ದ್ವಾಪರದಲ್ಲಿ ಪುಟ್ಟುತ
ಫಣಿವರ ಕೇತನ ಮೊರೆ ಲಾಲಿಸುತ
ದಿನಮಣಿ ಜಾತನ ದಿವ್ಯ ವರೂಥ
ಮಾನಿತ ಮಾನವಿ ಕ್ಷೇತ್ರ ನಿವಾಸ4
ಶ್ರೀ ನಿಧಿ ಶಾಮಸುಂದರ ದಾಸ
ಕ್ಷೋಣಿ ಸುರಾರ್ಚಿತ ದುರಿತ ವಿನಾಶ
ಹೀನ ಮತಾಖ್ಯ ಪನ್ನಗಕುಲವೀಶ 5
***
No comments:
Post a Comment