..
ಪೋತನ ಪಾಲಿಸೋಪವಮಾನಾ | ಈ
ಭೂತಳದೊಳು ನಿನ್ನ ಖ್ಯಾತಿ ಘುನಾ
ಒದಗಿನ ವ್ಯಾಧಿಯ ಪರಿಹರಿಸೊ ನಿನ್ನ
ಪದರಿಗೆ ಬಿದ್ದವನೆಂದು ಗ್ರಹಿಸೋ 1
ತಾಯಿಯು ಇಲ್ಲದ ಬಾಲಕನು | ಇವನ
ಕಾಯಲು ನೀ ದಯಾ ಸಾಗರನು 2
ಶ್ವಾಸದೊಡಿಯ ನೀನೆಂತೆಂದು | ಶೃತಿ
ಘೋಷಿಸುವದು ಆನತ ಬಂಧು3
ಶಿಶುವಿಗೊಲಿದು ನೀ ಸಲಹಿದರೆ | ದೇವ
ಅಸುನಾಯಕನೆಂಬ ಬಿರುದು ಖರೆ 4
ಗ್ರಾಮ ಬಲ್ಲಿಟಗಿ ಕೃತವಾಸ |
ಶಿರಿಶಾಮಸುಂದರನ ಪ್ರಿಯದಾಸ 5
***
No comments:
Post a Comment