Wednesday, 1 September 2021

ಗುರುವ್ಯಾಸರಾಯ ಪಾಲಿಸೊ ಮೊರೆ ಹೊಕ್ಕೆ ನಿನ್ನ ಶರಣನ್ನ ಮಾತು ಲಾಲಿಸೊ ankita shyamasundara

 ..

ಗುರುವ್ಯಾಸರಾಯ ಪಾಲಿಸೊ | ಮೊರೆ ಹೊಕ್ಕೆ ನಿನ್ನ

ಶರಣನ್ನ ಮಾತು ಲಾಲಿಸೊ ಪ


ಕರುಣಾಕರ ಭವ ಕರಕರಿಗಾರದೆ ಕರವ ಪಿಡಿದು

ಪೊರೆ ಎಂದು ನಿನ್ನ ನಾ ಕರೆವೆ ಬಾಯ್ದೆರೆವೆ

ಆಲ್ವರಿವೆ ನತಜನ ಸುರತರುವೆ ಅ.ಪ


ಮಧ್ವಮುನಿ ಸುಮತೋದ್ಧಾರಕ ಯತಿಕುಲ ತಿಲಕ

ಅದ್ವೈತಾರಣ್ಯ ಪಾವಕ | ವಿದ್ವತ್ ಜನತತಿ

ಸದ್ವಿನುತನೆ ಪಾದ ಪದ್ಮಕೆ ನಮಿಸುವೆ

ಶುದ್ಧ ಸುಜ್ಞಾನವ ನೀಡೊ ಅಘದೂಡೋ

ಕೃಪೆ ಮಾಡೋ | ಸುತನೆಂದು ನೋಡೋ 1


ವಿರಚಿಸಿ ಗ್ರಂಧತ್ರಯವ | ಬೋಧಿಸಿ ಭೇದ

ಪೊರೆದಿ ದ್ವಿಜ ಪರಿವಾರವ |

ನೆರೆನಂಬಿದ ಭೂಪಗೆ ಧಾವಿಸುತ

ಭರದಿ ಬರುವ ಕುಹಯೋಗ ಕಂಟಕವ ದಯದಿ

ನೀತರಿದಿ | ಸುಖಗರೆದಿ ಧಾರುಣಿಯೊಳು ಮೆರಿದಿ 2


ವಂದಿಪೆ ಸುಸುಗತಿದಾಯಕ ಶ್ರೀವರ ಶಾಮ

ಸುಂದರ ಕೃಷ್ಣೋಪಾಸಕ

ತಂದೆ ಎಂದು ನಿನ್ನ ಪೊಂದಿ ಪ್ರಾರ್ಥಿಸುವೆ

ಬಂದು ಜವದಿ ಪುರಂದರದಾಸರ ಪ್ರಿಯಾ 3

***


No comments:

Post a Comment