ರಾಮದಾಸರು
ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ
ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ
ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1
ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2
ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3
ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4
ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
***
No comments:
Post a Comment