Wednesday, 1 September 2021

ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ankita neleyadikeshava

 ..

ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ


ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ


ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2

***


No comments:

Post a Comment