Wednesday, 1 September 2021

ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ ಎತ್ತ ಹೋದರು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ ಎತ್ತ ಹೋದರು ನಮ್ಮ ಹತ್ತಿಲಿಹನೊ 1 

ನಿತ್ಯ ನಿಜ ಘನವಾಗಿ ಹೃತ್ಕಮಲದೊಳು ತಾಂ ಮುತ್ತಿನಂತೆ 2 

ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿ ಮೊತ್ತವಾಗಿಹ್ಯ ಪೂರ್ಣ ನೆತ್ತಿವೊಳಗ 3 

ದತ್ತವುಳ್ಳವನಿಗೆ ಹತ್ತಿಸಂಗಡ ಬಾಹ ವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ 4 

ದತ್ತಗಿಂದಧಿಕ ಮತ್ತೊಂದು ದೈವವು ಕಾಣೆ ಪೃಥ್ವಿಯೊಳು ಮಹಿಪತಿವಸ್ತು ಒಂದೆ 5

***


No comments:

Post a Comment