ಕಾಖಂಡಕಿ ಶ್ರೀ ಮಹಿಪತಿರಾಯರು
ನಾಚಿಕಿಲ್ಲೆ ಮನವೆ ಲೋಚಿ ಬಿಟ್ಟ ದನವೆ ಊಚ ನೀಚಕಾಗಿ ಹೊಡೆದಾಡುದಿನ್ನು ಗುಣವೆ 1
ಹೇಸಿಕಿಲ್ಲೆಂಬುದು ವಿಷಯದೊಳು ನಿಂದು ವ್ಯಸನಕಾಗಿ ಫಸಿಗೆ ಬೀಳುವದೆ ನಿನ್ನ ಕುಂದು 2
ಜನಿಸಿ ಯೋನಿಯಮುಖ ಏನು ಕಂಡ್ಯೊ ಸುಖ ಶ್ವಾನಸೂಕರದ ಜನ್ಮ ತಾಳಿದಿ ಅನೇಕ 3
ಭವ ಬವಣಿಗೆ ಬುದ್ಧಿ ಇದೆ ಶರಣುಹೋಗು ಸದ್ಗುರುವಿಗೆ 4
ಪಿಡಿದು ಗುರುಪಾದ ಪಡಿಯೊ ನಿಜಬೋಧ ಮೂಢ ಮಹಿಪತಿ ನಿನಗಿದೆ ಸುಪ್ರಸಾದ 5
****
No comments:
Post a Comment