ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನಮ್ಮ ಕಾವ ಕರುಣನು ಶ್ರೀನಾಥ ಪೂರ್ಣ ನೀನೆ ನಮ್ಮ ಕಾವ ಕರುಣನು ಪ
ನೀನೆ ನಮ್ಮ ಕಾವ ಕರುಣ ಭಾನುಕೋಟಿತೇಜಪೂರ್ಣ ದಾತ ಶ್ರೀನಾಥ ಸದ್ಗುರುರಾಯ ರನ್ನ 1
ನೇಮದಿಂದ ಭೋರ್ಗರೆವ ನಾಮ ನಿಮ್ಮ ಕಾಮಧೇನು ಕಾಮ್ಯ ಪೂರಿಸುವ ನಿಮ್ಮ ಕರುಣ ಕಲ್ಪವೃಕ್ಷವಯ್ಯ 2
ಹೇಮರೌಪ್ಯ ರತ್ನವಾದ ದಯವೆ ನಿಮ್ಮ ನವನಿಧಿಯ ನಿಮ್ಮ ಅಭಯಪೂರ್ಣವೆನಗೆ ಅಷ್ಟಮ ಸಿದ್ಧಿವಯ್ಯ3
ಸಂಜೀವ ನಮಗೆ ಸೌಖ್ಯನಿತ್ತು ಹೊರೆವ ನಿಮ್ಮ ಸ್ಮರಣೆ ಚಿಂತಾಮಣಿಯ 4
ತಂದೆಯಹುದೊ ಮಹಿಪತಿಯ ಚೆಂದಮಾಡುವ ಬಂದು ಜನ್ಮ ಬಂಧು ಬಳಗೆ ನೀನೆ ಅಯ್ಯ 5
***
No comments:
Post a Comment