ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ಗುರುನಾಥ ಎಂದು ತ್ರಾಹಿ ದೀನನಾಥ ಎಂದು ಸಾಹ್ಯ ಮಾಡಿಕೊಳ್ಳಿ ಬಂದು ಸೋಹ್ಯದೋರುವ ದೀನಬಂಧು pa
ವ್ಯರ್ಥಗಳಿಯಬ್ಯಾಡಿ ಜನ್ಮ ಗುರ್ತು ಮಾಡಿಕೊಳ್ಳಿ ನಿಮ್ಮ ಸಾರ್ಥಕಿದೆ ಸಂತ ಧರ್ಮ ಅರ್ತುಕೊಳ್ಳಾನಂದೊ ಬ್ರಹ್ಮ 1
ಸಾರಿ ಚೆಲ್ಯದ ಹರಿರೂಪ ದೋರುವ ಗರುಕುಲದೀಪ ದೋರುತಿಹ್ಯದು ಚಿತ್‍ಸ್ವರೂಪ ಸೂರ್ಯಾಡಬಹುದು ಸ್ವಸ್ವರೂಪ 2
ಸ್ವಾರ್ಥ ಅತಿಹಿಡಿಯಬ್ಯಾಡಿ ಮತ್ರ್ಯದೊಳು ಮರ್ತುಬಿಡಿ ಕರ್ತು ಸ್ವಾಮಿಯ ಅರ್ತು ಕೂಡಿ ಬೆರ್ತು ನಿಮ್ಮೊಳು ನಿರ್ತ ನೋಡಿ 3
ಏನು ಹೇಳಲಿ ಹರಿಯ ಸು ಖೂನದೋರುದು ಸಂತ ಮುಖ ಙÁ್ಞನಿ ಬಲ್ಲೀ ಕೌತುಕ ಧನ್ಯವಾಯಿತು ಮೂರುಲೋಕ 4
ಹಿಡಿದು ನಿಜ ಒಂದು ಪಥ ಪಡೆದ ಮಹಿಪತಿ ಹಿತ ಒಡೆಯನಹುದಯ್ಯ ಈತ ಭುಕ್ತಿ ಮುಕ್ತಿದಾತ 5
****
No comments:
Post a Comment