Tuesday, 9 November 2021

ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ದಿಮ್ಮಿ ಸಾಲೆನ್ನಿರೊ ankita hayavadana DIMI SAALE RANGA DIMMI SAALE DIMMI SAALENNIRO




ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ಪ.


ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದುಗೋಪಾಂಗನೇರÀ ಮೇ¯ ಒಪ್ಪಿ ಭಸ್ಮ ಸೂಸುತಅ.ಪ.


ಶಂಖನಾದ ಕೊಳಲ ಭೇರಿ ಪೊಂಕದಿ ಪಂಚಮಹಾವಾದ್ಯದಿಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ1


ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪಮಾಡಿನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ 2


ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತುವರದ ಕೆÉೀಶವನ ಮೇಲೆ ಪರಿದು ಸೂಸಿ ಭಸ್ಮವ 3


ಮತ್ತೆ ಕುಶಲದ ಬಾಲೆಯರುಗಳಿತ್ತೆರದಲಿ ಬಂದು ನಿಂತುಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ 4


ವಾದಿರಾಜಗೊಲಿದು ಬಂದು ಸೋದೆಪುರದಲ್ಲಿ ನಿಂದಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ5

***


No comments:

Post a Comment