ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ಗರ್ವ ಹಿಡಿಯ ಬ್ಯಾಡಾ ಪ
ಜಗದೊಳಗ ಹಿತ ಮಾಡಿಕೊ | ಸಂತರೊಳು ಕೂಡಿ ನೀ ಪ್ರಾಣಿ ಅ.ಪ ಸುರಪದ ಮದ-ಗಜವೇರಿ ಸುರಸೈನ್ಯದಿಂಬರಲು | ಕರುಣದಿಂ ದೂರ್ವಾಸ ಸರ್ವ ಕುಡಲು | ಕೊರಳಿಗಿಕ್ಕದೆ ಬಿಡಲು ಧರೆಗೆರಗುವದ ಕಂಡು | ಮೊರೆದು ಕೋಪಿಸಲು ಸಿರಿಹರದ್ಹೋಯಿತು ಪ್ರಾಣಿ 1
ನೃಪತಿ ನಹುಷನನು ಯಜ್ಞ ಅಪರಿಮಿತ ಮಾಡಿ ನಿಜ | ಉಪಬೋಗಿಸದೆ ತಾ ಸುರಪ ಪದವಿಯಾ | ವಿಪುಲ ಋಷಿಯರ ಕೂಡ ಅಪಹಾಸ ಮಾಡಲಿಕೆ | ಶಪಿಸಲಾಕ್ಷಣ ಉರಗಾಧಿಪನಾದ ಪ್ರಾಣಿ 2
ವೈರಿ ಗರ್ವ ವಿದ್ಯಕ ಹಾನಿ | ಗರ್ವದಿಂ ಕೆಡಬಹುದುರ್ವಿಯೊಳಗ | ಸರ್ವಥಾ ಬ್ಯಾಡೆಂದು ಹೊರೆಯೊ ಗುರು ಮಹಿಪತಿ | ಅರ್ವವನು ಕೊಟ್ಟೆನಗ ಸರ್ವರೊಳು ಪ್ರಾಣಿ 3
****
No comments:
Post a Comment