Wednesday, 1 September 2021

ಪನ್ನಗ ವೇಣಿ ನಿನ್ನ ನಗಲಿದಾ ಮೊದಲಿನ್ನುಕೋಮಲಾಂಗನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪನ್ನಗ ವೇಣಿ | ನಿನ್ನ ನಗಲಿದಾ | ಮೊದಲಿನ್ನುಕೋಮಲಾಂಗನಾ | ಮುನ್ನಿನೊಲುವನಾಕಾಣೆ | ಮಂದಗಮನೆ ಪ 


ಕಂಗಳೆವಿಯಾ ಸಿಕ್ಕದೆ | ನಿನ್ನನೆನೆದು | ಅಂಗ ಕಳೆಗಳ ತೋರದೇ | ರಂಗ ನೆಡಬಲ ನೋಡಾ | ಇಂಗಿತ ಮಾನಿನಿಯರಾ | ಮುಂಗೋಪಿಯಾದಾ ಕೇಳಮ್ಮಾ ಹೇಳಲೇನಮ್ಮ1 

ವಿರಹ ತಾಪವ ಬರೆದು ವಿರಕ್ತಿಯಿಂದಾ | ತಿರುಕರ ವೇಷ ತಳೆದು ಧರೆಯಾಧಾರೆಯೆರೆದು | ಅರಸುತನವ ಬಿಟ್ಟು | ಮರಳ ಗೋಲರಾ ಸೇರಿದಾ | ಮಾತು ಮೀರಿದಾ 2 

ವರದ ತಂದೆ ಮಹಿಪತಿ | ನಂದನ ಪ್ರಾಣಾ | ಸಾರಥಿ | ಕರುಣಾಳು ಎಂಬುದಕೆ | ತುರುಗಾವನಾಗಿ ಬಂದ | ಹರಿಣಾಕ್ಷಿ ಏಳಾಲಿಂಗಿಸೇ3

****


No comments:

Post a Comment