ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ
ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1
ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2
ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3
ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4
ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
****
No comments:
Post a Comment