Wednesday, 1 September 2021

ನೆರೆ ಮಾಡುವೆ ನಮ್ಮೈಯ್ಯಾ ಸಾಧುರಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೆರೆ ಮಾಡುವೆ ನಮ್ಮೈಯ್ಯಾ ಸಾಧುರಾ ಪ 


ಝಮ್ಮನೆ ಹೋಗುವೆ | ಸುಮ್ಮನದಿ ಬಾಗುವೆ | ಮುಮ್ಮಳಿ ತ್ರಯಗಳ ನೀಗುವೆ ನಮ್ಮೈಯ್ಯಾ 1 

ಬೋಧಾಮೃತನುಂಬೆ | ಮಾಧವನಾ ಕಾಂಬೆ | ಸಾದರ ಪರಗತಿ ಪಡಕೊಂಬೆ ನಮ್ಮೈಯ್ಯಾ 2 

ಘನಗುರು ಚರಿತವಾ | ನೆನೆಯುತ ನಿರುತವಾ | ಮನಕ ಮಾಡುವೆ ಪ್ರೇಮ ಭರಿತವಾ ನಮ್ಮೈಯ್ಯಾ 3 

ಶ್ರವಣ ಮಾಡುವೆ | ತವಕದಿ ಕೊಡುವೆ | ಹವಣಿಸಿ ವರಗಳ ಬೇಡುವೇ ನಮ್ಮೈಯ್ಯಾ4 

ಮಹಿಪತಿ ಸುತ ಪ್ರೀಯಾ | ಮಹಿಯೊಳೊಲಿವಪರಿಯಾ | ವಿಹಿತದಿ ಬಲುವೆನೆ ಭಕ್ತಿಯಾ ನಮ್ಮೈಯ್ಯಾ5

***


No comments:

Post a Comment