ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ
ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1
ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2
ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3
ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4
ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5
ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
***
No comments:
Post a Comment