Wednesday, 1 September 2021

ಹೊಂದಿ ಬದುಕಿರೈಯ್ಯಾ ದೇವನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹೊಂದಿ ಬದುಕಿರೈಯ್ಯಾ ದೇವನಾ | ತರು | ಣೇಂದು ಶೇಖರ ಉಮಾ ಧವನಾ || ವಂದಿಸಿದವರಘವೃಂದ ನಿವಾರಿಸಿ | ಕೈವಲ್ಯ ತಂದು ಕೊಡುವನಾ ಪ 


ಸ್ಮರಿಸಿದವರ ಬದಿಯಲಿರುವಾ | ತನ್ನ | ಶರಣರಿಷ್ಟಾರ್ಥವಗರವಾ || ಕರುಣದಿ ಪತಿತರುದ್ಧರಿಸಲು | ತಾರಕ | ಗುರುರೂಪ ತಾನಾಗಿ ಧರೆಲಿ ಮೆರೆವನಾ 1 

ಗಗನಧುನಿ ಧರಿಸಿದನಾ | ಬೆಟ್ಟ | ಮಗಳಿಗೆ ಅರ್ಧಾಂಗಿ ನೀಡಿಹನಾ || ನಿಗಮಾಗ ಮಂಗಳಯುಗತಿಗೆ | ನಿಲುಕದು | ನಿಲುಕದುರಗ ಭೂಷಣ ಭಸ್ಮಾಂಗ ವಿಗಢ ನಾಟಕನಾ 2 

ಘನಸಾರ ಗೌರಾಂಗ ಹರನಾ | ತಪ್ತ | ಕನಕ ವರ್ಣ ಜಟಾಧರನಾ || ಮುನಿಜನ ಶುಭತದವನ ಚೌರ್ಚಿತ | ಪದ || ಅನುದಿನ ಮಹಿಪತಿ ಜನ ಸಲಹುವನಾ3

***


No comments:

Post a Comment