Wednesday, 1 September 2021

ವ್ಯರ್ತವಾಯಿತು ಜನುಮಾ ಹರಿಭಕ್ತಿ ಅರ್ಥಿಯ ನೆಲೆಗೊಳ್ಳದೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ವ್ಯರ್ತವಾಯಿತು ಜನುಮಾ | ಹರಿಭಕ್ತಿ | ಅರ್ಥಿಯ ನೆಲೆಗೊಳ್ಳದೇ ಪ 


ನೊಣ ಮಧು ಬಿಂದುದಲೀ ಕುಳಿತಂತೆ | ವಣ ವಿಷಯದ ಸುಖಕ | ಹೆಣಗುತ ನಿಶಿದಿನದೀ | ತಾಪತ್ರಯ | ಕುಣಿಯೊಳು ಹೊರಳುತಲೀ 1 

ಅವನಿಲಿ ಸಂಸಾರದೀ ಸಂಟರ್ಘಾಳಿ | ರವದಿಯಾ ತೆರೆ ಶಿಲುಕೀ | ವಿಧಿ ಬರ | ಹ್ಯಾವ ತಿಳಿಯದೆ ಮರುಗೀ 2 

ಭೋಗಿನಾ ತ್ಯಾಗಿಯಾಗಿ ಆಯುಷ್ಯ | ನೀಗಿ ಯಚ್ಚರವಿಲ್ಲದೇ | ಶ್ರೀ ಗುರುಮಹಿಪತಿ ಸುತಪ್ರಭು | ಭಾಗವತರ ಕೂಡದೇ 3

***


No comments:

Post a Comment