Wednesday, 1 September 2021

ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ankita gadugina veeranarayana

..

kruti by ವೀರನಾರಾಯಣ Veeranarayana 


ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ


ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ.


ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ 1


ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ 2


ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ವೀರನಾರಾಯಣನು ನೀನೆ 3

***

 

No comments:

Post a Comment