..
kruti by ವೀರನಾರಾಯಣ Veeranarayana
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ
ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ.
ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ 1
ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ 2
ಗದುಗಿನನೊಳ್ಮೆರೆವ ವೀರನಾರಾಯಣಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ 3
***
No comments:
Post a Comment