..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ
ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ
ಘಮ್ಮನೆ ಕಾಲ ಕಳೆವ ಪಾಮರ ಮನುಜನ ಅ.ಪ
ಹರಿದಿನದುಪವಾಸ ಮರುದಿನ ಪಾರಣೆ
ಸರಿಯಾಗಿ ಮಾಡಿದೆನೆ
ಕೊರಳಲ್ಲಿ ತುಳಸೀ ಸರಗಳ ಧರಿಸಿ
ಹರಿಗೆ ಮೈಮರೆದಾನೊಂದಿಸಿದೆನೆ 1
ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ
ಕ್ಷೇತ್ರಗಳ ಬಳಸಿ
ಕ್ಷೇತ್ರಜ್ಞನಾ ಪಾದ ನೇತ್ರದಿಂದ ನೋಡಿ
ಕೃತಾರ್ಥ ನಾನಾದೆನೆ 2
ವರ ನಾರೇರ ಕಂಡು ನರಕ ಭಯವಿಲ್ಲದೆ
ಕರೆದು ಮನ್ನಿಸುವ
ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು
ನಿರುತ ನಾ ಜಪಿಸುವೆನೆ 3
ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ
ಲಲಿತದಿಂ ಕುಣಿಯುವೆನೆ
ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ
ಬಾಲಲೀಲೆ ಪಾಡಿ ಲೋಲನಾಗುವೆನೆ 4
ಕಂದರ್ಪ ಪಿತನಾದ ವಿಜಯ ರಾವi
ಚಂದ್ರವಿಠಲನ್ನ ಮಂದಹಾಸ ಮುಖವನ್ನು
ಒಂದಿನವಾದರು ನೋಡ್ಯಾನಂದಪಟ್ಟು
ಮಂದ ಜ್ಞಾನ ತೊರೆದನೆ 5
***
No comments:
Post a Comment