..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ
ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ
ಮಾನ್ಯ ಶ್ರೀಮದಾನಂದರ ಪಾದ ಪೊಂದಿದ್ದರೆ ಸಾಕೊ ಅ.ಪ
ಜೀವೋತ್ತಮರ ಭಾವವನನುಸರಿಸಿ
ನೋವಾಗುವ ಮಾರ್ಗವ ಜರಿದು
ಭಾವಜನಯ್ಯ ನಿನ್ನ ಭಾವವ ಕಂಡು
ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು 1
ದೇಹಸ್ಥಿರವಲ್ಲ ದಹನಶೀಲಭವ
ಇಹಸುಖ ಹೇಯವೆಂದು
ಮೋಹಪಾಶಕೆ ಸಿಗಿಸದೆ ನಿನ್ನನುಪಮ
ಮಹಿಮೆಗಳ ಕೇಳುತ ಆನಂದವಾದರೆ ಸಾಕು 2
ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ
ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು
ಆದಿ ವಿಜಯ ರಾಮಚಂದ್ರವಿಠಲನೆ ಅಗಾಧಮಹಿಮ
ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ3
***
No comments:
Post a Comment