ಕಮಲೇ ಕಮಲಾಲಯೇ ಪ
ಕಮಲಭವಾದಿ ಸುರವಂದಿತಪದೆ ಅ.ಪ
ತ್ರಿಗುಣಾಭಿಮಾನಿಯೇ ನೀ-ಅಗಣಿತಗುಣಶ್ರೇಣಿಯೇ
ಖಗವಾಹನನರಾಣಿಯೇ
ಹಗಲು ಇರುಳು ಹರಿಪದಯುಗ ತೋರಿಸೇ 1
ಲಿಂಗಶರೀರವ ಭಂಗವಗೈಯ್ಯಲು ನಿ
ನ್ನಂಗದಲ್ಲಿನಾ ಬೆವರಿನಾ
ಸಂಗವಾಗಲು ಭವಭಂಗ ಹಿಂಗುವುದು 2
ಧಾಮತ್ರಯರೂಪಿಣೀ ಕಮಲಭವಾಂಡಕಾರಿಣೀ
ವಿಮಲಪದುಮ ಸರೋವಾಸಿನೀ
ಸ್ವಾಮಿತೀರ್ಥದಿ ನಿಂತ ಶ್ರೀ ವೆಂಕಟೇಶನ ರಾಣಿ 3
***
No comments:
Post a Comment