Wednesday, 1 September 2021

ಹರಿದಿನಕೆ ಸಮನಾದ ಸರಿದಿನ ಮತ್ತಿಲ್ಲ ಹರಿದು ಪಾಪದರಾಶಿ ಪರಗತಿಯ ತೋರ್ಪುದು ankita shreehari

 ..

ರಚನೆ: Dr. ಸುಧಾ ಆದಿಶೇಷ

ಹರಿದಿನ ಮಹಿಮೆ


ಹರಿದಿನಕೆ ಸಮನಾದ ಸರಿದಿನ ಮತ್ತಿಲ್ಲ

ಹರಿದು ಪಾಪದರಾಶಿ ಪರಗತಿಯ ತೋರ್ಪುದು||ಪ||


ಹರುಷದಿಂದಲೆ ಎದ್ದು ಉದಯ ಕಾಲದ ಕರ್ಮ

ಪರುಷೋತ್ತಮನ ಪೂಜೆಯೆಂದು ಪೂರೈಸಿ

ವರ ಶಾಸ್ತ್ರ ಶ್ರವಣದಿ ಮನವಿಟ್ಟು ಸುಖಿಸುತ

ಅರವಿಂದನಾಭನ ಅರಘಳಿಗೆ ಬಿಡದೆ ಭಜಿಸುತಿರು||೧||


ನಿರ್ಜರ ವಂದಿತನ ನಿಜ ಭಕುತಿ ಬೇಡುತ

ನಿರ್ಜಲ ಉಪವಾಸ ಜಾಗರವ ಮಾಡುತ

ಅರ್ಜುನ ಸಖನಿತ್ತ ಗೀತಾಮೃತದ ಪಾನದಿ

ಆರ್ಜಿಸು ಮೋಕ್ಷಸುಖ ನರಜನ್ಮ ಸಾರ್ಥಕವು||೨||


ಹರಿದಿನದ ಹಿರಿಮೆಯ ಹರಿಭಕ್ತರರಿವರು

ದ್ರುವರಾಜ ಪ್ರಹ್ಲಾದ ಅಂಬರೀಷರೆ ಸಾಕ್ಷಿ

ನರಕವ ತಪ್ಪಿಸುವ ಮರುತ ಮತವನನುಸರಿಸಿ 

 ಶ್ರೀಹರಿಯೆ ಸರ್ವೋತ್ತಮನೆಂದು ಕೊಂಡಾಡು||೩||

***




No comments:

Post a Comment