..
kruti by shantibai dasaru ಶಾಂತಿಬಾಯಿ ದಾಸರು
ಬಿಡಬ್ಯಾಡೆನಗೆ ಹರಿಯೇ ತಡಮಾಡಲ್ಯಾಕೆ ದೊರೆಯೇ
ದಯಮಾಡಿ ಪೊರೆಯೋ ಇಂದು ಭಯ
ನಿವಾರನೇ ನೀ ಬಂದು ಪ
ಗಜರಾಜ ಪಶುವ ಹಿಂದೆ ಭಜಿಪಾಗ ನೀನೆ ಬಂದೆ
ನಿಜವಾಗಿ ನಕ್ರನೊದೆದು ಸುಜನನಾಥ ನೀ ಕರೆದೊಯ್ದು 1
ಪಾಂಚಾಳಿ ಸಭೆಯೊಳಂದು ವಂಚಕ ದುಶ್ಯಾಸನ ಬಂದು
ಮುಂಚಿತದಿ ಸೀರೆ ಎಳೆಯೆ ವಾಂಛಿತದಿ ಕಾಯ್ದ ಆ ಪರಿಯೇ 2
ಅಂದಾಗಲೂ ಪುತ್ರನನು ಕರೆದಾಗಲಜಾಮಿಳನು ಭರ
ದಿಂದ ಕಾಯ್ದೆ ಅವನಾ ಮರದ್ಯಾತಕೀಗಲೆನ್ನಾ 3
ಈ ಪರಿಯ ಕೀರ್ತಿ ಪಡದು ಕೋಪಿಸಲು ಬ್ಯಾಡ ಮರೆದು
ಶ್ರೀ ಪತಿಯೆ ಪದವನೀಯೋ ಉಪರಮೆ ಶಾಂತಿ ಕಾಯೋ4
***
No comments:
Post a Comment