Thursday, 5 August 2021

ಚಿಕ್ಕವನೇನೆ ಮಿಕ್ಕಾದಂಥ ಮಕ್ಕಳಿಲ್ಲೇನೆ ನಿಮ್ಮವರೊಳು ankita rukmesha

 ..

kruti by rukmangadaru

ಚಿಕ್ಕವನೇನೆ ಮಿಕ್ಕಾದಂಥ | ಮಕ್ಕಳಿಲ್ಲೇನೆ, ನಿಮ್ಮವರೊಳು ||ದಿಕ್ಕಿಲ್ಲವೇನೆ, ಇವಗೆ ತಕ್ಕ |ಬುದ್ಧಿಯ ಕಲಿಸುವವರಿನ್ನು ಪ


ತಂಡ ತಂಡದಿ ಬರುತಿಹ ನಮ್ಮನ |ಕಂಡು ಆಡುವ ಆಟಕಿಯ ಬಿಟ್ಟು ||ಚೆಂಡು ಪುಟಿದು ಬಂತು ಬಚ್ಚಿಟ್ಟಿರ್ಯಾಕೆಂದು |ದುಂಡ ತೋಳಗಳೆತ್ತಿ ಭಂಡು ಮಾಡುವನಿವ 1

ಶಿಶುವೆಂದು ಎತ್ತಪ್ಪಿಕೊಂಡು ಮುದ್ದಿಡಲು |ದಶನಗಳಿಂದಧರ ನೋಯಿಸಲು ||ಆಶೆಯಲಸುವ ಪೀರಿದವನಿವನೆಂದಂಜಿ |ಸೊಸಿಯನ್ನಬ್ಬರಿಸಿ ಬೀದಿಯೊಳಂದು 2

ಆರಿಲ್ಲದಾಗೊಬ್ಬವನನ್ನು ಬಾಲಕನೆಂದು |ದ್ವಾರವಿಕ್ಕಿ ನೀರೆ ಮೇಲಿರಿಸಿ ||ಬಾರಯ್ಯ ಮುದ್ದು ಕೊಡಯ್ಯ ಎನೆ ಹದಿ- |ನಾರು ವರುಷದವನಾದ ರುಕ್ಮಭೂಷಾ 3

***


No comments:

Post a Comment