..
kruti by rukmangadaru
ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ
ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ 1
ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ 2
ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ 3
***
No comments:
Post a Comment