..kruti by rukmangadaru
ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ
ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? 1
ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? 2
ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? 3
ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? 4
ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? 5
****
No comments:
Post a Comment