ದನವ ಕಾಯ್ವೊನೆ ದೈನ್ಯ ಬಡುವವನೆ ವನಜಭವಾಂಡಕೆ ಒಡೆಯನಾಗೆಂದರೆಒಲ್ಲದೆ ವನವನ ತಿರುಗಿದನಮ್ಮ ನೋಡಮ್ಮಯ್ಯ ಪ.
ದನಗಾಹಿ ಎಂದರೆ ಎನಗೇನು ಸಂಶಯವಿಲ್ಲಜನರೆಲ್ಲ ಬಲ್ಲರು ಈ ಮಾತು ಜನರೆಲ್ಲ ಬಲ್ಲರು ಈ ಮಾತು ಭಾವಯ್ಯನೆನಪಿಸಿ ಕೊಟ್ಟೆಲ್ಲೊ ಮರೆತಿದ್ದೆ 1
ಗೋಪಾಲ ಶಬ್ದಾರ್ಥ ನೀ ಕೇಳಿಶ್ರೀ ಕೃಷ್ಣ ಕೋಪವಿನ್ಯಾಕೊ ಎನಮ್ಯಾಲೆ ಕೋಪ ವಿನ್ಯಾಕೊ ಎನ ಮ್ಯಾಲೆ ಭಾವಯ್ಯನೀ ಪೇಳಿಕೊಂಡ್ಯೊ ನಿಷ್ಕಪಟಿ 2
ಕುದುರೆಯ ಮಾರಿಯ ಹೂವು ಗಣ್ಣಿನ ವರನಿಗೆ ಮದಗಜಗಮನೆ ಮನಸೋತುಮದಗಜಗಮನೆ ಮನಸೋತು ಮ್ಯಾಲಿನ್ನುಬದಲು ಮಾತಾಡಿ ಫಲವೇನೊ3
ನಾರುವ ಮೈಯವ ನೀರೊಳು ಅಡಗಿದ ಹಂದಿ ಮೈಯವನೆ ಮಹಾಕೋಪಿಹಂದಿ ಮೈಯವನೆ ಮಹಾಕೋಪಿ ತಿರುತಿಂಬೊಹಾರುವನ ಗೊಡವೆ ನಮಗ್ಯಾಕೊ 4
ಕೊಡಲಿಯ ಪಿಡಕೊಂಡ ಪಡೆದಮಾತೆಯಕೊಂದೆ ಒಡಲಿಗಿಕ್ಕದಲೆ ಮಡದಿಯಒಡಲಿಗಿಕ್ಕದಲೆ ಮಡದಿಯ ಕೊಂಡೊಯ್ದುಅಡವಿಗಟ್ಟಿದ ಮಹಾ ಮಹಿಮನೆ5
ಜಾರ ಚೋರನೆಂದು ಜಗದೊಳು ಹೆಸರಾದಿಅಪಾರವಾದ ವನಿತೆಯರುಅಪಾರವಾದ ವನಿತೆಯರ ಒಗೆತನಕೆನೀರು ತಂದಿದ್ದ ಮಹಾಮಹಿಮನೆ 6
ಭಂಡ ಗಾರನಂತೆ ದೇಹ ಕಂಡಜನಕೆಲ್ಲತೋರಿ ಪುಂಡಗಾರನಂತೆ ಹಯವೇರಿಪುಂಡಗಾರನಂತೆ ಹಯವೇರಿ ಹಾರಿಸುವ ಲೆಂಡ ರಾಮೇಶನ ಅರಿವೆನೊ7
***
No comments:
Post a Comment