..
Kruti by ಸರಸಾಬಾಯಿ Sarasabai
ಬಂದಳು ನೋಡೆ ಇಂದಿರ ದೇವಿ ಪ.
ಬಂದಳು ನೋಡೆ ಗೋವಿಂದನ ಸತಿಯು
ಸುಂದರ ಪಾದದಿಂದ ಒಂದೊಂದು ಹೆಜ್ಜೆಯನಿಡುತಾ ಅ.ಪ.
ಉಲ್ಲಾಸದಿಂದಲೀ ಚೆಲ್ವೆ ಬಂದಳೀಗ 1
ವಜ್ರದಂತೆ ಕಾಂತಿ ಪ್ರಜ್ವಲಿಸುತ್ತಲೀ
ಗೆಜ್ಜೆಪಾದದಿಂದ್ಹೆಜ್ಜೆಯನಿಡುತಲೀಗ2
ಮಾರನಮಾತೆಯು ಮುಂಗುರುಳನೇ ತಿದ್ದಿ
ಮುಡಿಯ ಮೇಲಿನ ಮಲ್ಲಿಗೆ ಉದುರುತ್ತ 3
ಕಡಗ ಕಂಕಣವು ಬೆಡಗಿನಿಂದಾಲಿಟ್ಟು
ನಡಮುಡಿಮೇಲೆ ಅಡಿಯನಿಡುತಲೀಗ 4
ಕುಕ್ಷಿಯೊಳೀರೇಳು ಜಗವಪೊತ್ತುವನಾ
ವಕ್ಷಸ್ಥಳದ ಲಕ್ಷ್ಮಿ ಬಂದಾಳೀಗ 5
ಹರಿಯ ಮಂದಿರಕ್ಕೆ ಸರಸದಿಂದಲೀಗ
ಓರೆನೋಟದಿಂದ ಮುಗುಳು ನಗೆಯ ನಗುತ 6
ಚಂದದಿಂದಲೀಗ ಬಂದು ಕುಳಿತುಕೊಂಡು
ಮಂದ ಭಾಗ್ಯಳಿಗಾನಂದವ ಕೊಡುವಳು 7
ಇಂದಿರೆ ದೇವನ್ನ ಬಂಧನವಾ ಬಿಡಿಸಿ
ತಂದೆಗೋವಿಂದನ್ನ ಕಂಡು ತೋರೆ ತಾಯಿ 8
ರಮಾವಲ್ಲಭವಿಠಲನ ಸ್ಮರಣೆಯು
ನಿರುತ ಮಾಡುವಂಥ ವರವ ಕೊಡು ತಾಯೆ 9
***
No comments:
Post a Comment