Thursday, 5 August 2021

ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ankita raghurama vittala

  ..

ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ


ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ


ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ

ಆರು ಜನ ಕೆಲಸಗಾರರನಲ್ಲಿ ಕೂಡಿ

ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ

ಭಾರಿನೆಲಗಟ್ಟು ರಚಿಸಿದರೊಂದುಗೂಡಿ 1

ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ

ಚೆÀಲುವ ಚರ್ಮ ಹೊದ್ದಿಸಿ

ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ

ಬಲುಉಸಿರುಬಲದಿಂದಲದ ಚಲನಗೊಳಿಸಿ 2

ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ

ಐದುಬಗೆ ವಿಷಯಗಳು ಆಹಾರವಾಗೆ

ವೈದು ಯಮಪುರಿಗೆ ತಲ್ಪಿಸÀಲುಣಿಸನಿದನುಂಡು

ಐದಿದುದು ನರಕಕೂಪಕೆ ಜೀವದಂಡು 3

ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು

ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು

ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ

ನೇತ್ರ ಹಸ್ತಗಳ ಛೆÉೀದಿಸದೆ ಉಳುಹಿದೆಯೆಂತು 4

ಸರ್ವಸ್ವತಂತ್ರನೀ ಜೀವ ಪರತಂತ್ರನವ

ಗರ್ವ ಅe್ಞÁನ ಅಂಧತೆಗಳಲಿ ಸಿಲುಕಿ

ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು

ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ 5

****


No comments:

Post a Comment