..
kruti by radhabai
ಮಾಡಿರೆ ಆರತಿಯಾ ಹರಿಗೋವಿಂದನಿಗೇ ಪ
ನೀರೊಳು ಮುಳುಗಿದಾ ಭಾರ ಬೆನ್ನಲಿ ಪೊತ್ತ,
ಕೋರೆ ದಾಡಿಯ ತೋರಿ ಕಂದನ ಕಾಯ್ದಗೆ 1
ನೆಲನ ಮೂರಡಿ ಆಡಿ ಛಲದಿ ಕೊಡಲಿ ಪಿಡಿದು
ಶಿಲೆಯ ರಕ್ಷಿಸಿದ ಶ್ರೀ ರಾಮ ಚಂದ್ರಗೇ 2
ಹಾಲು ಮೊಸರು ಬೆಣ್ಣೆ ಕದ್ದು ಮೆದ್ದವನಿಗೆ
ಬೆತ್ತಲೆನಾದ ಬುದ್ಧ ಮೂರುತಿಗೇ 3
ವರ ತುರಗವನ್ನೇರಿ ಜಗವನೆಲ್ಲವ ತಿರುಗೀ
ಜಗವರಕ್ಷಿಸುವ ವೆಂಕಟ ವಿಠಲಗೇ 4
***
No comments:
Post a Comment