..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಕುಮಾರ ಪಾಲಿಸೋ ನಿನ್ನ ಚಾರು ಚರಣಕೆ ನಾ
ನಮಿಪೆ ಕೃಪಾಕರ ಪ
ಸುಂದರಾನನ ಸ್ಕಂಧ ಕಾಮಗೋ
ವಿಂದಸುತ ಸುಂದರಾಂಗ ಪ್ರದ್ಯುಮ್ನನೆ
ಇಂದಿರೇಶನ ದಯ ತಂದು ನೀ ಒದಗಯ್ಯ
ವಂದಿಪೆ ನಿನ್ನರವಿಂದ ಪಾದಕೆ ನಾ 1
ಸೂರ ಪದುಮಾದಿ ಅಸುರರೆಲ್ಲ ನೀ
ಮುರಿದು ಪೊರೆದೆಯೊ ಮೂರು ಜಗವ ಎನ್ನ
ಘೋರ ಬಾಧೆಗಳನ್ನು ತರಿದು ನೀ ಪೊರೆಯಯ್ಯ
ಧೀರ ಉದಾರನೆ ಸುರಸೇನಾಧಿಪ 2
ಸೋಮವದನ ಉಮೇಶಸುತ ಗುಹ
ಪ್ರೇಮದಯದಿ ಭ್ರಮಾಕಲುಷ ಕೀಳೊ
ಬೊಮ್ಮನ ತಾತ ಪ್ರಸನ್ನ ಶ್ರೀನಿವಾಸ
ವಾಮನ ಶ್ರೀಶನ ಪ್ರೇಮ ಸುಪಾತ್ರನೆ 3
***
No comments:
Post a Comment