..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ರಾಮನ ನೋಡ ಬನ್ನಿರೆ ಭಾಮೆಯರೆಲ್ಲ ಪ
ರಾಮನ ನೀವು ನೋಡ ಬನ್ನಿರೆ ಕಾಮಿತಾರ್ಥವಬೇಡಿಸುಖಿಸಿರೆ
ಸ್ವಾಮಿ ನೀನೆ ಗತಿ ಎಂದರೆ ಕಾಮಿತಾರ್ಥವನೀವ ದೊರೆಯನ ಅ.ಪ
ಸೀತೆಗೋಸುಗ ಸೇತುವೆಯ ಕಟ್ಟಿ ಧೂರ್ತ ರಾವಣನ Wಟ್ಟಿಸಿ
ಖ್ಯಾತಿಯಿಂದಲಿ ರಥವನೇರಿ ಸೀತೆಸಹಿತ ಬರುವನಂತೆ 1
ಹರಿಯುನರನಾಗುತಲಿ ಬಂದು ವರ
ಅಯೋಧಾü್ಯಪುರದಿ ನಿಂದು
ಮರೆವ ಸಿಂಹಾಸನವನೇರುತ ಹರುಷದಲಿ ತಾ ಕೂಡುವನಂತೆ 2
ಮಾನನಿಧಿ ಪ್ರಾಣನಾಥವಿಠಲ ಸಾನುರಾಗದಿ ಭಜಿಸುವರಸುರ
ಧೇನುವಂದದಿ ಸಲಹುವನು ಮಾನಿನಿಯರು ಮನ್ನಿಸುತ ಬೇಗ 3
***
No comments:
Post a Comment