..
kruti by pradyumna teertha ಪ್ರದ್ಯುಮ್ನತೀರ್ಥರು
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ
ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ
ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ
ನರರ ಸಂದಣಿಯಲಿ ವಿರತಿ ಮಾತಾಡಿಸಿ
ಮಾರನಾಟದಿ ಮನವೆರಗುವಂದದಿ ಮಾಡಿ 1
ಕಾಷಾಯ ದಂಡಿ ವೇಷವ ಧರಿಸಿ ಮುನ್ನ
ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2
ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ
ಕಾಳಿಮರ್ಧನ ದೇವ ಮಲಿನ ಮನವನಿತ್ತು 3
ಕರವಶವನೆ ಮಾಡಿ ಸರಸದಿಂದ ಕಲೆಹಾಕಿ
ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4
ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ
ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5
ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ
ಒದಗಿಸೆನ್ನಲಿ ದೂರನಾದಿಯ ಹೇ ಮಾಧವ 6
ಪತಿತಾಗ್ರಣಿಯು ನಾನು ಪತಿತ ಪಾವನ ನೀನು
ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7
ದ್ವಿಜ ಅಜಮಿಳ ನಿಜನಾಮದಿಂದಲಿ
ಸುಜನನೆಂದೆನಿಸಿದ್ದು ನಿಜತೋರದಲೆನ್ನ 8
ಹೀನರೊಳೆನ್ನೆಂಥ ಹೀನ ಜನರ ಕಾಣೆ
ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
***
No comments:
Post a Comment