ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಭನವೆನ್ನಿರೋ ಶೋಭನ ಬನ್ನಿರೆ ಶೋಭನ ಬನ್ನಿ ಸವ್ಯದಿಂದ ಪ
ಶೋಭಾನವೆಂಬೋದು ಸೋಹಂಭಾವಗುಣ ಅಹಂಭಾವಿಗಳು ಅರಿಯವು ಅಹಂಭಾವಿಗಳು ಅರಿಯುವು ಅನಂಗನ ಅಹಂಭ್ರಮೆಯು ವಿಪರೀತ 1
ಶೋಭನವೆನ್ನಿರೇ ಸಿದ್ಧಾಂತನುಭವಿಗಳು ಕಾಮಿ ಕಾಮಣ್ಣನ ಮದುವಿಗೆ ಪ್ರಾಣಿ ಮಾತ್ರಗಳೆಲ್ಲ ಬರಬೇಕು 2
ಶೋಭನವೆನ್ನಿರೇ ಮದೂಣಿಗಾನಂಗಗೆ ಕಾಮಿತದಳಗಿತ್ತಿ ಅರಸಗ ಕಾಮಿತದಳಗಿತ್ತಿ ಅರಸ ಮೋಹನ್ನಗೆ ನೆರೆಯಿತು ಲೋಕ ಧರೆಯೊಳು 3
ಶೋಭನವೆನ್ನಿರೇ ಕಾಮಿ ಕಾಮಣ್ಣಗೆ ಕಾಯದೊಳೀಹ್ಯ ಕರುಣಿಗೆ ಕಾಯದೊಳಿದ್ದು ಮೆರೆವ ಅನಂಗನು ಚರ್ಮದಬೊಂಬಿ ಗುರುತಾಗಿ 4
ಶೋಭನವೆನ್ನಿರೇ ಸಜ್ಜನ ಸಾವಿತ್ರೇರು ಆನಿ ಮೊದಲೆ ಇರುಹು ಕಡಿಗೆಲ್ಲ ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ ಶೋಭಾನಯೆಂದ ಸಬೂದಿಂದ 5
***
No comments:
Post a Comment